ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ ತೆಕ್ಕಟ್ಟೆಯ 4ನೇ ತರಗತಿಯ ವಿದ್ಯಾರ್ಥಿ ದಿವಿನ್ ಪಿ. ಶೆಟ್ಟಿ ಕಿರಿಯರ ಕರಾಟೆ ವಿಭಾಗದಲ್ಲಿ 35 ಸೆಕೆಂಡ್ನಲ್ಲಿ 50 ನುಂಚಾಕ್ಯೂ ಪಂಚ್ಗಳನ್ನು ಮಾಡಿ ಅತ್ಯಂತ ವೇಗದ ಪಂಚ್ ಮಾಡಿರುವ ಸಾಧನೆಯನ್ನು ಮಾಡಿ 2023-24ನೇ ಸಾಲಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ದಾಖಲಿಸಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್ ಪ್ರಭಾಕರ ಶೆಟ್ಟಿ, ಪ್ರಾಂಶುಪಾಲ ನಿತಿನ್ ಡಿ ಆಲ್ಮೇಡಾ ಹಾಗೂ ಶಿಕ್ಷಕರು ವಿದ್ಯಾರ್ಥಿಯ ಅಪ್ರತಿಮ ಸಾಧನೆಗೆ ಅಭಿನಂದಿಸಿ ಶುಭಹಾರೈಸಿದರು.