Kundapra.com ಕುಂದಾಪ್ರ ಡಾಟ್ ಕಾಂ

ಅನುದೀಪ್ ಹಾಗೂ ಮಿನುಷಾ ದಂಪತಿಗೆ ಗಣರಾಜ್ಯೋತ್ಸವಕ್ಕೆ ಆಹ್ವಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಬೈಂದೂರಿನ ಅನುದೀಪ್ ಹಾಗೂ ಮಿನುಷಾ ದಂಪತಿಗೆ ಈ ವರ್ಷ ಭಾಗವಹಿಸಲು ಪ್ರಧಾನಮಂತ್ರಿ ಕಚೇರಿಯಿಂದ ಆಹ್ವಾನ ಬಂದಿದ್ದು, ಹೊಸದಿಲ್ಲಿಗೆ ತೆರಳಿದ್ದಾರೆ.

2020ರ ನವೆಂಬರ್ನಲ್ಲಿ ವಿವಾಹವಾಗಿದ್ದು ಅವರು, ಹನಿಮೂನ್ ಬದಲಿಗೆ ಬೈಂದೂರಿನ ಸೋಮೇಶ್ವರ ಬೀಚ್ ಸ್ವಚ್ಛತೆ ಮೂಲಕ ಗುರುತಿಸಿಕೊಂಡಿದ್ದರು. ಈ ವಿಚಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ನಲ್ಲಿ ಉಲ್ಲೇಖ ಮಾಡಿದ್ದರು.

ಬೀಚ್ ಸ್ವಚ್ಛತೆಯ ಪಣತೊಟ್ಟ ದಂಪತಿಗಳು ಪ್ರತಿದಿನ ಸಂಜೆ 2ಗಂಟೆ ಶ್ರಮದಾನ ಮಾಡಿ ತೀರದಲ್ಲಿ ಬಿದ್ದಿದ್ದ ಮದ್ಯದ ಬಾಟಲಿ, ಪ್ಲಾಸ್ಟಿಕ್, ಚಪ್ಪಲಿ ಹೀಗೆ 9 ದಿನಗಳ ಅವಧಿಯಲ್ಲಿ ಹೀಗೆ ಸುಮಾರು 800ಕೆ.ಜಿಯಷ್ಟು ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದ್ದಾರೆ. ಇದು ಪ್ರಧಾನಿಗಳ ಗಮನವನ್ನೂ ಸೆಳೆದಿತ್ತು.

ಬೈಂದೂರು ತಾಲೂಕಿನ ಕಳವಾಡಿಯವರಾದ ಅನುದೀಪ್ ಹೆಗ್ಡೆ ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್. ತಮ್ಮದೇ ಸ್ವುಡಿಯೋ1 ಪ್ರೊಡಕ್ಷನ್ ಮೂಲಕ ಈ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಮಿನುಷಾ ಫಾರ್ಮಾಸಿಟಿಕಲ್ ಕಂಪನಿ ಉದ್ಯೋಗಿ. ತಮ್ಮ ಮದುವೆಯ ನೆನಪು ಬಹುಕಾಲ ಉಳಿಯ

ಇದನ್ನೂ ಓದಿ:
► ನವದಂಪತಿಗಳ ವೆಡ್ಡಿಂಗ್ ಚಾಲೆಂಜ್‌ಗೆ ಭಾಗಶಃ ಕಸಮುಕ್ತವಾದ ಸೋಮೇಶ್ವರ ಬೀಚ್! – https://kundapraa.com/?p=43090 .
► ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿದ ನವ ದಂಪತಿಗಳಿಗೆ ಪ್ರಧಾನಿ ಮೋದಿ ಶ್ಲಾಘನೆ – https://kundapraa.com/?p=43634 .

Exit mobile version