Site icon Kundapra.com ಕುಂದಾಪ್ರ ಡಾಟ್ ಕಾಂ

ಚೈತ್ರಾ ಕುಂದಾಪುರ ಗ್ಯಾಂಗ್‌ನಿಂದ ಪ್ರಾಸಿಕ್ಯೂಷನ್ ವಿಟ್ನೆಸ್ ಕೊಲೆಗೆ ಯತ್ನ?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉದ್ಯಮಿಯೋರ್ವರಿಗೆ ವಂಚಿಸಿ ಜೈಲುಪಾಲಾಗಿ, ಸದ್ಯ ಬೇಲ್ ಪಡೆದು ಹೊರಗಿರುವ ಚೈತ್ರಾ ಕುಂದಾಪುರ ಮತ್ತು ಸಹಚರರು ಮತ್ತೆ ಪುಂಡಾಟಕ್ಕೆ ಇಳಿದಿರುವ ಬಗ್ಗೆ ಆರೋಪ ಕೇಳಿಬಂದಿದ್ದು, ವಂಚನೆ ಪ್ರಕರಣದ ಪ್ರಮುಖ ಸಾಕ್ಷಿಯೋರ್ವ ಈ ಬಗ್ಗೆ ಚಿಕ್ಕಮಗಳೂರು ಎಸ್ಪಿಗೆ ದೂರು ನೀಡಿದ್ದಾನೆ.

ಚೈತ್ರಾ ಗ್ಯಾಂಗ್‌ನ ಟಿಕೆಟ್ ಡೀಲ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರನಾಗಿರುವ ರಾಮಕುಮಾರ್ ಕೊಲೆಗೆ ಯತ್ನ ಆರೋಪ ಕೇಳಿಬಂದಿದೆ. ಸಲೂನ್ ಮಾಲೀಕನಾಗಿರುವ ರಾಮಕುಮಾರ್ ಮೇಲೆ ಗಗನ್ ಕಡೂರು ಕಡೆಯವರಿಂದ ದಾಳಿ ನಡೆದಿದೆ ಎಂದು ದೂರು ದಾಖಲಿಸಿದ್ದಾನೆ. ಗೋವಿಂದ ಪೂಜಾರಿ ಎಂಬುವವರಿಗೆ ವಂಚನೆ ಕೇಸ್ನಲ್ಲಿ ಪ್ರಮುಖ ಸಾಕ್ಷಿಯಾಗಿರುವ ರಾಮಕುಮಾರ್ ಎಂಬುವವರಿಗೆ ಸಾಕ್ಷಿ ಹೇಳದಂತೆ ಆರೋಪಿ ಕಡೆಯಿಂದ ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.

ಈ ಬಗ್ಗೆ ಮೊದಲಿಗೆ ಕಡೂರು ಠಾಣೆಯಲ್ಲಿ ದೂರು ನೀಡಲಾಗಿತ್ತು ಆದರೆ ಸರಹದ್ದು ಸಮಸ್ಯೆ ಕಾರಣಕ್ಕಾಗಿ ಬೀರೂರು ಠಾಣೆಗೆ ತೆರಳಿ ದೂರು ನೀಡಲಾಗಿತ್ತು. ಹಲ್ಲೆ, ಗಾಯ ಬಗ್ಗೆ ವೈದ್ಯಕೀಯ ವರದಿ ಇದ್ದರೂ ಎಫ್.ಐ.ಆರ್ ದಾಖಲಿಸದೇ ಎನ್.ಸಿ.ಆರ್ ದಾಖಲಿಸಿ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಎಸ್ಪಿಗೆ ದೂರು ನೀಡಿರುವ ರಾಮಕುಮಾರ್ ತನಗೆ ರಕ್ಷಣೆ ನೀಡಬೇಕೆಂದು ಕೋರಿಕೊಂಡಿದ್ದಾರೆ.

Exit mobile version