Kundapra.com ಕುಂದಾಪ್ರ ಡಾಟ್ ಕಾಂ

ನಾಗೂರು: ಖಾಸಗಿ ಬಾವಿಯಲ್ಲಿ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ಮೊಸಳೆ ಸೆರೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ನಾಗೂರು ಗ್ರಾಮದ ಖಾಸಗಿ ತೋಟದ ಬಾವಿಯೊಂದಲ್ಲಿ ಕಾಣಿಸಿಕೊಂಡಿದ್ದ ಬೃಹತ್‌ ಗಾತ್ರದ ಮೊಸಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಮೀನುಗಾರರ ನೆರವಿನೊಂದಿಗೆ ಬುಧವಾರ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಗಿದೆ.

ಮಂಗಳವಾರ ಬಾವಿಯಲ್ಲಿ ಮೊಸಳೆ ಕಾಣಿಸಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಮನೆಮಾಡಿತ್ತು. ಮೊಸಳೆಯನ್ನು ಸೆರೆ ಹಿಡಿಯಲು ಕೇಜ್‌ ಇರಿಸಿ ಅದರ ಚಲನವಲನಗಳ ಮೇಲೆ ನಿಗಾ ಇರಿಸಲು ಬಾವಿಯ ಎದುರು ಅಳವಡಿಸಲಾಗಿತ್ತು. ಆದರೆ ಮೊಸಳೆ ಕೇಜ್‌ ಪ್ರವೇಶಿಸದೇ ಬಾವಿಯಲ್ಲಿಯೇ ಉಳಿದಿತ್ತು. ಬುಧವಾರ ಮತ್ತೆ ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆಯ ಸಿಬ್ಬಂದ್ದಿಗಳು, ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಬಲೆಯನ್ನು ಬಳಸಿ ಸುರಕ್ಷಿತವಾಗಿ ಮೊಸಳೆಯನ್ನು ಮೇಲಕ್ಕೆತ್ತಿದ್ದಾರೆ.

ಕಾರ್ಯಾಚರಣೆಯಲ್ಲಿ ಸ್ಥಳೀಯರು ಸಾಥ್‌ ನೀಡಿದ್ದು, ಮೊಸಳೆ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಈ ವೇಳೆ ಬೈಂದೂರು ತಹಶಿಲ್ದಾರ್‌ ಪ್ರದೀಪ್‌ ಆರ್.‌, ವಲಯ ಅರಣ್ಯಾಧಿಕಾರಿ ಸಂದೇಶ್‌, ಬೈಂದೂರು ಪಶುಸಂಗೋಪನಾ ಇಲಾಖಾ ವೈದ್ಯ ಡಾ. ನಾಗರಾಜ ಮರವಂತೆ, ಪಿಎಸೈ ತಿಮ್ಮೇಶ್‌, ಅಗ್ನಿಶಾಮಕದಳದ ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ ► ನಾಗೂರು: ಬಾವಿಯಲ್ಲಿ ಕಾಣಿಸಿಕೊಂಡ ಬೃಹತ್ ಮೊಸಳೆ. ಸೆರೆಗೆ ಕೇಜ್ ಇರಿಸಿದ ಅರಣ್ಯ ಇಲಾಖೆ – https://kundapraa.com/?p=74841 .

Exit mobile version