ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೊಳನಕಲ್ಲು ಕಿರಿಯ ಪ್ರಾಥಮಿಕ ಶಾಲೆ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಅಭಿವೃದ್ಧಿಯನ್ನು ಕಾಣುತ್ತಿದೆ. ಗ್ರಾಮೀಣ ಕನ್ನಡ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಹೆಚ್ಚು ಹೆಚ್ಚು ಅವಕಾಶ ನೀಡುತ್ತಾ, ದೇಶಭಕ್ತಿ ಬೆಳೆಯುವಂತೆ ಮಾಡಬೇಕು ಎಂದು ತಾಲೂಕು ಪಂಚಾಯತ್ ಕುಂದಾಪುರದ ಮಾಜಿ ಸದಸ್ಯರಾದ ಪ್ರದೀಪ್ ಕುಮಾರ್ ಶೆಟ್ಟಿ ಅವರು ಕೊಳನಕಲ್ಲು ಶಾಲೆಯಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಸುಬ್ರಹ್ಮಣ್ಯ ಕೆದ್ಲಾಯ ಅವರು ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲಿ ವಿದ್ಯಾರ್ಥಿಗಳಿಗೆ ಉಲ್ಲಾಸ್ ಡಿಸಿಲ್ವಾ ಕೋಟೇಶ್ವರ ಮತ್ತು ಪಾರ್ವತಿ ಸಿಲ್ಕ್ಸ್ ಬಿದ್ಕಲ್‌ಕಟ್ಟೆ ಅವರು ಜಂಟಿಯಾಗಿ ನೀಡಿದ ಸಮವಸ್ತ್ರ ವಿತರಿಸಲಾಯಿತು. ಶಾಲೆಯ ಸೌಂದರ್ಯೀಕರಣಕ್ಕೆ ದೇಣಿಗೆ ನೀಡಿದ ಸತ್ಯನಾರಾಯಣ ಕೆದ್ಲಾಯ, ಸಮವಸ್ತ್ರದ ಭಾಗಶಃ ದೇಣಿಗೆ ನೀಡಿದ ಪಾರ್ವತಿ ಸಿಲ್ಕ್ಸ್ ಬಿದ್ಕಲ್‌ಕಟ್ಟೆ ಆಡಳಿತ ಪಾಲುದಾರರಾದ. ದಿನೇಶ್ ಕುಲಾಲ್ ಮತ್ತು ಪ್ರಶಾಂತ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ಶಾಲಾ ಸುಣ್ಣ ಬಣ್ಣಕ್ಕೆ ದೇಣಿಗೆ ನೀಡಿದ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಗಣೇಶ್ ಶೆಟ್ಟಿ ಅವರಿಗೆ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಕೆದ್ಲಾಯ ಅವರು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ಯಾಮಣ್ಣ ಶೆಟ್ಟಿ, ರತ್ನಾಕರ ಶೆಟ್ಟಿ, ರತ್ನಾಕರ ಶೆಟ್ಟಿ ಮಂಡಳ್ಳಿ ಅವರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಗಂಗಮ್ಮ ಶೆಟ್ಟಿ ಅವರು ಪ್ರಸ್ತಾವನೆ ಮಾಡಿ, ಸಹ ಶಿಕ್ಷಕಿ ಸ್ವಪ್ನ ಸತೀಶ್ ಪೂಜಾರಿ ಅವರ ನಿರೂಪಿಸಿ ಧನ್ಯವಾದ ಸಮರ್ಪಣೆ ಮಾಡಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.