Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಪ್ರಾಂಶುಪಾಲರಿಗೆ ನೀಡಿಬೇಕಿದ್ದ ಪ್ರಶಸ್ತಿಗೆ ತಡೆ. ಟೀಕೆಗೆ ಕಾರಣವಾದ ರಾಜ್ಯ ಸರಕಾರದ ನಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉತ್ತಮ ಪ್ರಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಪ್ರಶಸ್ತಿ ನೀಡಲು ಕೊನೆಯ ಕ್ಷಣದಲ್ಲಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯನ್ನು ರಾಜ್ಯ ಸರ್ಕಾರ ಪ್ರಶಸ್ತಿಯನ್ನು ತಡೆಹಿಡಿದಿದೆ.

ಇಂದು (ಸೆ.5) ಶಿಕ್ಷಕರ ದಿನಾಚರಣೆ ಹಿನ್ನೆಲೆ ವಿವಿಧ ಶಿಕ್ಷಕರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಪ್ರಶಸ್ತಿ ನೀಡುವುದನ್ನು ಸರ್ಕಾರ ತಡೆ ಹಿಡಿದಿದೆ. ಸರಕಾರದ ಈ ನಡೆದ ಇದೀಗೆ ಟೀಕೆಗೆ ಕಾರಣವಾಗಿದೆ.

► ಕುಂದಾಪುರ: ರಾಮಕೃಷ್ಣ ಬಿ. ಜಿ. ಅವರಿಗೆ ಉತ್ತಮ ಪ್ರಾಚಾರ್ಯ ರಾಜ್ಯ ಪ್ರಶಸ್ತಿ – https://kundapraa.com/?p=76098 .

ಎರಡು ವರ್ಷಗಳ ಹಿಂದೆ ನಡೆದಿದ್ದ ಹಿಜಬ್ ವಿವಾದದ ಪರಿಣಾಮ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ತಡೆಹಿಡಿದಿದೆ ಎನ್ನಲಾಗಿದೆ. ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಕಾಲೇಜು ಗೇಟ್ ಹೊರಕ್ಕೆ ನಿಲ್ಲಿಸಿದ್ದರು. ಆ ಫೋಟೊ ವೈರಲ್ ಆಗಿತ್ತು. ಪ್ರಾಂಶುಪಾಲರ ಪ್ರಶಸ್ತಿ ಹಿಂಪಡೆಯುವಂತೆ ಕೆಲ ಪ್ರಗತಿಪರರು ಒತ್ತಡ ಹಾಕಿದ್ದರು. ಒತ್ತಡಕ್ಕೆ ಮಣಿದ ಸರ್ಕಾರ ಪ್ರಶಸ್ತಿಯನ್ನು ತಡೆಹಿಡಿದಿದೆ ಎಂಬ ಮಾತುಗಳು ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಾಂಶುಪಾಲರನ್ನು ಸಂಪರ್ಕಿಸಲಾಗಿದ್ದು, ಅವರ ಪೋನ್ ಸ್ವೀಚ್ ಆಫ್ ಆಗಿತ್ತು.

Exit mobile version