ಕುಂದಾಪುರ: ರಾಮಕೃಷ್ಣ ಬಿ. ಜಿ. ಅವರಿಗೆ ಉತ್ತಮ ಪ್ರಾಚಾರ್ಯ ರಾಜ್ಯ ಪ್ರಶಸ್ತಿ

Click Here

Call us

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
2024-25ನೇ ಸಾಲಿನ ಉತ್ತಮ ಪ್ರಾಚಾರ್ಯ ರಾಜ್ಯ ಪ್ರಶಸ್ತಿಗೆ ಕುಂದಾಪುರ  ಸರಕಾರಿ ಪ. ಪೂ ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಬಿ. ಜಿ. ಅವರು ಭಾಜನರಾಗಿದ್ದಾರೆ.

Click Here

Call us

Click Here

ಶಿವಮೊಗ್ಗ ಜಿಲ್ಲೆಯ ಸಾಗರದವರಾದ ರಾಮಕೃಷ್ಣ ಅವರು ಬೆಳೆಯೂರಿನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಮೈಸೂರು ವಿವಿಯಲ್ಲಿ ಪದವಿ ಹಾಗೂ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ. ಪೂ. ಶಿಕ್ಷಣ ಇಲಾಖೆಯ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷರಾಗಿದ್ದರು.

ಕೊಪ್ಪ ಸರಕಾರಿ ಪ. ಪೂ.ಕಾಲೇಜಿನಲ್ಲಿ 10 ವರ್ಷ, ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನಲ್ಲಿ 15 ವರ್ಷ ಉಪನ್ಯಾಸಕರಾಗಿದ್ದು, ಕಳೆದ 6 ವರ್ಷಗಳಿಂದ ಪ್ರಾಂಶುಪಾಲರಾಗಿದ್ದಾರೆ.

ಕುಂದಾಪುರ ಜ್ಯೂನಿಯರ್‌ ಕಾಲೇಜಿನಲ್ಲಿ ಪ್ರಸ್ತುತ ವರ್ಷದಲ್ಲಿ 1391 ವಿದ್ಯಾರ್ಥಿಗಳು ಓದುತ್ತಿದ್ದು, ಬೇಡಿಕೆ ಇರುವ ಕಂಪ್ಯೂಟರ್‌ ಸೈನ್ಸ್‌ ಹಾಗೂ ಸಂಖ್ಯಾಶಾಸ್ತ್ರ ವಿಷಯವನ್ನು ಸೈನ್ಸ್‌ ಹಾಗೂ ಕಾಮರ್ಸ್‌ ವಿಭಾಗದೊಂದಿಗೆ ಜೋಡಿಸಿ ಹೆಚ್ಚಿನ ವಿದ್ಯಾರ್ಥಿಗಳನ್ನುಕಾಲೇಜಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಯೋಗ ಶೀಲತೆ ಜತೆಗೆ ಪುಸ್ತಕ ಗ್ರಂಥ ಭಂಡಾರ, ಜಿ. ಪಂ ಹಾಗೂ ಕುಂದಾಪುರ ಪುರಸಭೆ ನೆರವಿನಿಂದ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಪರೀಕ್ಷೆಗೆ ಆನ್‌ಲೈನ್ ತರಬೇತಿ ವ್ಯವಸ್ಥೆ ಮಾಡಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಪೂಝರ ಸಹಕಾರ ನೀಡಲು ಪ್ರಯತ್ನಿಸಿದ್ದಾರೆ.

Leave a Reply