Site icon Kundapra.com ಕುಂದಾಪ್ರ ಡಾಟ್ ಕಾಂ

14ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಸಾಬ್ರಕಟ್ಟೆ ಶಾಲೆ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ನಿಟ್ಟೂರು ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ 14ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಾಬ್ರಕಟ್ಟೆಯ ರೋಹಿತ್ ನಾಯಕತ್ವದ ಬಾಲಕರ ತಂಡ  ದೊಡ್ಡ ಅಂತರದಲ್ಲಿ ಎದುರಾಳಿ ತಂಡಗಳನ್ನು ಮಣಿಸಿ, ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ, ಅಕ್ಟೋಬರ್‌ನಲ್ಲಿ ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆಯಲಿರುವ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಂಡದ ವಂಶಿತ್ ಪಂದ್ಯಾಟದ ಬೆಸ್ಟ್ ಆಲ್ ರೌಂಡರ್ ಮತ್ತು ಮಹಾರಾಜ ಬೆಸ್ಟ್ ಡಿಫೆಂಡರ್ ಆಗಿ ವೈಯಕ್ತಿಕ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ವಿದ್ಯಾರ್ಥಿಗಳನ್ನು ದೈಹಿಕ ಶಿಕ್ಷಕರಾದ ಗಜೇಂದ್ರ ಶೆಟ್ಟಿ ಅವರು ತರಬೇತು ಗೊಳಿಸಿದ್ದಾರೆ. ಶಾಲೆಯ ಈ ತಂಡದ ಸಾಧನೆಯನ್ನು ಹಳೆ ವಿದ್ಯಾರ್ಥಿ ಸಂಘ, ಎಸ್ ಡಿ ಎಂ ಸಿ ಹಾಗೂ ಸ್ಥಳೀಯ ಸಂಘ ಸಂಸ್ಥೆಯವರು ಹರ್ಷ ವ್ಯಕ್ತ ಪಡಿಸಿದ್ದಾರೆ.

Exit mobile version