ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೈಂದೂರು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮೆರೆದು, 7 ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕ್ರಮವಾಗಿ, ಕನ್ನಡ ಭಾಷಣ ಸ್ಪರ್ಧೆಯಲ್ಲಿ ಶ್ರುತಿಕಾ ಶೆಟ್ಟಿ ಪ್ರಥಮ ಸ್ಥಾನ, ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ರಕ್ಷಿತಾ ಭಟ್ ಪ್ರಥಮ ಸ್ಥಾನ, ಕನ್ನಡ ಆಶುಭಾಷಣ ಸ್ಪರ್ಧೆಯಲ್ಲಿ ಸ್ಮೃತಿಕಾ ಪ್ರಥಮ ಸ್ಥಾನ, ಸಂಸ್ಕ್ರತ ಭಾಷಣ- ಪ್ರಥಮ್ ಜಿ. ಪ್ರಥಮ ಸ್ಥಾನ, ಭರತನಾಟ್ಯ- ವೈಷ್ಣವಿ ಪ್ರಥಮ ಸ್ಥಾನ, ಸಂಸ್ಕ್ರತ ಧಾರ್ಮಿಕ ಪಠಣ- ಅವನಿ ಭಟ್ ಪ್ರಥಮ ಸ್ಥಾನ, ಭಾವಗೀತೆ- ಜಯಶ್ರೀ ಪ್ರಥಮ ಸ್ಥಾನ, ಗಝಲ್- ಶ್ರೀ ರಾಮ್ ಭಟ್ ದ್ವಿತಿಯ ಸ್ಥಾನ, ಕವ್ವಾಲಿ(ಗುಂಪು ಸ್ಪರ್ಧೆ)ರಿಷಿಕಾ, ದಿತ್ಯಾ, ದೀಕ್ಷಾ, ನಿರೀಕ್ಷಾ, ನಿಶಾಂತ್ ಕಿಣಿ, ಮಂದಿರ್ ತೃತೀಯ ಸ್ಥಾನ ಪಡೆದಿರುತ್ತಾರೆ.
ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು,ಬೋಧಕ/ಬೋಧಕೇತರ ವೃಂದದವರು
ಅಭಿನಂದನೆ ಸಲ್ಲಿಸಿದ್ದಾರೆ.