ಜನತಾ ಕಾಲೇಜಿನ ವಿದ್ಯಾರ್ಥಿಗಳು ಬೈಂದೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅಮೋಘ ಸಾಧನೆ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೈಂದೂರು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮೆರೆದು, 7 ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Call us

Click Here

ಕ್ರಮವಾಗಿ, ಕನ್ನಡ ಭಾಷಣ ಸ್ಪರ್ಧೆಯಲ್ಲಿ ಶ್ರುತಿಕಾ ಶೆಟ್ಟಿ ಪ್ರಥಮ ಸ್ಥಾನ, ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ರಕ್ಷಿತಾ ಭಟ್ ಪ್ರಥಮ ಸ್ಥಾನ, ಕನ್ನಡ ಆಶುಭಾಷಣ ಸ್ಪರ್ಧೆಯಲ್ಲಿ ಸ್ಮೃತಿಕಾ ಪ್ರಥಮ ಸ್ಥಾನ, ಸಂಸ್ಕ್ರತ ಭಾಷಣ- ಪ್ರಥಮ್ ಜಿ. ಪ್ರಥಮ ಸ್ಥಾನ, ಭರತನಾಟ್ಯ- ವೈಷ್ಣವಿ ಪ್ರಥಮ ಸ್ಥಾನ, ಸಂಸ್ಕ್ರತ ಧಾರ್ಮಿಕ  ಪಠಣ- ಅವನಿ ಭಟ್ ಪ್ರಥಮ ಸ್ಥಾನ, ಭಾವಗೀತೆ- ಜಯಶ್ರೀ ಪ್ರಥಮ ಸ್ಥಾನ, ಗಝಲ್- ಶ್ರೀ ರಾಮ್ ಭಟ್ ದ್ವಿತಿಯ ಸ್ಥಾನ, ಕವ್ವಾಲಿ(ಗುಂಪು ಸ್ಪರ್ಧೆ)ರಿಷಿಕಾ, ದಿತ್ಯಾ, ದೀಕ್ಷಾ, ನಿರೀಕ್ಷಾ, ನಿಶಾಂತ್ ಕಿಣಿ, ಮಂದಿರ್ ತೃತೀಯ ಸ್ಥಾನ ಪಡೆದಿರುತ್ತಾರೆ.

ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು,ಬೋಧಕ/ಬೋಧಕೇತರ ವೃಂದದವರು
ಅಭಿನಂದನೆ ಸಲ್ಲಿಸಿದ್ದಾರೆ.

Leave a Reply