Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಟ: ರಿಕ್ಷಾ ಪಲ್ಟಿಯಾಗಿ ಐವರಿಗೆ ಗಾಯ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಬೇಳೂರು ಗ್ರಾಮದ ದೇವಸ್ಥಾನಬೆಟ್ಟು ಎಂಬಲ್ಲಿ ಆಟೋರಿಕ್ಷಾ ಅಡ್ಡ ಬಂದ ನಾಯಿ ತಪ್ಪಿಸುವ ಭರದಲ್ಲಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಮಗುಚಿದ ಪರಿಣಾಮ ಐವರು ಗಾಯಗೊಂಡ ಘಟನೆ ಸೋಮವಾರದಂದು ನಡೆದಿದೆ.

ಕೋಟ ಕಡೆಯಿಂದ ಬೇಳೂರು ಕಡೆಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆಗೆ ಅಡ್ಡ ಬಂದ ನಾಯಿಯನ್ನು ಕಂಡು ಆಟೋ ರಿಕ್ಷಾವನ್ನು ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿ, ರಸ್ತೆಯ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದೆ ಪರಿಣಾಮ ಆಟೋ ರಿಕ್ಷಾವು ಪಲ್ಟಿಯಾಗಿ ಬಿದ್ದು ಅದರಲ್ಲಿರುವ ಪ್ರಯಾಣಿಕರಾದ ಶ್ರೀಲತಾ, ಅನುಷಾ, ಗೌತಮಿ, ಶ್ರೀಜನ್ಯ, ರಿಕ್ಷಾ ಚಾಲಕ ಸದಾಶಿವ ಗಾಯಗೊಂಡಿದ್ದಾರೆ. ಪ್ರಯಾಣಿಕರನ್ನು ಕೊಡಲೇ ಕೋಟೇಶ್ವರದ ಎನ್‌ ಆರ್‌ ಆಚಾರ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಿಕ್ಷಾ ಚಾಲಕನನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version