ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಚಿವರ್ಸ್ ಕುಂದಾಪುರ ನೇತೃತ್ವದಲ್ಲಿ ಕರ್ಣಾಟಕ ಬ್ಕಾಂಕ್ ಉದ್ಯೋಗಿಗಳು ಹಾಗೂ ಕುಟುಂಬಿಕರಿಗೆ ಆಯೋಜಿಸಲಾದ ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಕ್ರೀಡಾಕೂಟ – ಅಚಿವರ್ಸ್ ಟ್ರೋಫಿ 2025 ಎರಡು ದಿನಗಳ ಕಾಲ ಕೋಟೇಶ್ವರದಲ್ಲಿ ಯಶಸ್ವಿಯಾಗಿ ಜರುಗಿತು.
ಬೆಂಗಳೂರು ಲಯನ್ ತಂಡ ಪ್ರಥಮ ಸ್ಥಾನ ಹಾಗೂ ಅಚೀವರ್ಸ್ ಕುಂದಾಪುರ ತಂಡ ದ್ವಿತೀಯ ಸ್ಥಾನ ಪಡೆಯಿತು. ಬ್ಯಾಂಕಿನ ಬೆಂಗಳೂರು, ಮಂಗಳೂರು, ಮೈಸೂರು, ತುಮಕೂರು, ದಾವಣಗೆರೆ ಉಡುಪಿ ಕುಂದಾಪುರದ 12 ಕ್ರಿಕೆಟ್ ತಂಡಗಳು ಭಾಗವಹಿಸಿದ್ದವು. ಮಹಿಳಾ ಸಿಬ್ಬಂದಿಗಳು & ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ಜರುಗಿದವು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಉಪಾಧ್ಯಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಆಫೀಸರ್ ಆರ್ಗನೈಸಷನ್’ನ ಜನರಲ್ ಸೆಕ್ರೆಟರಿ ಸುರೇಶ ಹೆಗ್ಡೆ, ಪಿ.ಎನ್.ಬಿ ಮೆಟ್ ಲೈಫ್ ಇನ್ಶೂರೆನ್ಸ್ ರಿಜಿನಲ್ ಹೆಡ್ ಹಾರುಷ ಶೆಣೈ ಭಾರತಿ ಎ.ಎಕ್ಸ್.ಎ ಇನ್ಶೂರೆನ್ಸ್ ರಿಜಿನಲ್ ಮ್ಯಾನೇಜರ್ ಪ್ರದೀಪ್ ಶೆಟ್ಟಿ, ಬ್ಯಾಂಕ್ ನ ಅಧಿಕಾರಿಗಳಾದ ಅನಂತ ಪದ್ಭನಾಭ, ರವಿಚಂದ್ರ ಹೊಳ್ಳ, ರವೀಂದ್ರ ಶಾನುಬಾಗ್, ರಾಘವೇಂದ್ರ ನಾಯ್ಕ್ ಉಪಸ್ಥಿತರಿದ್ದರು
ಕರ್ಣಾಟ ಬ್ಯಾಂಕಿನ ಗಣೇಶ್ ಹೊಳ್ಳ ಸ್ವಾಗತಿಸಿ, ಹೆಬ್ಬಾಡಿ ರಾಘವೇಂದ್ರ ಶೆಟ್ಟಿ ಧನ್ಯವಾದ ಸಮರ್ಪಸಿದರು. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
► ಕುಂದಾಪುರ: ಕರ್ನಾಟಕ ಬ್ಯಾಂಕ್ ಉದ್ಯೋಗಿಗಳ ಕ್ರೀಡಾಕೂಟ ಅಚಿವರ್ಸ್ ಟ್ರೋಫಿ 2025 ಉದ್ಘಾಟನೆ – https://kundapraa.com/?p=82286 .