ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಚಿವರ್ಸ್ ಕುಂದಾಪುರ ನೇತೃತ್ವದಲ್ಲಿ ಕರ್ಣಾಟಕ ಬ್ಕಾಂಕ್ ಉದ್ಯೋಗಿಗಳು ಹಾಗೂ ಕುಟುಂಬಿಕರಿಗೆ ಆಯೋಜಿಸಲಾದ ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಕ್ರೀಡಾಕೂಟ – ಅಚಿವರ್ಸ್ ಟ್ರೋಫಿ 2025 ಕೋಟೇಶ್ವರದಲ್ಲಿ ಅದ್ದೂರಿಯಾಗಿ ಉದ್ಘಾಟನೆಗೊಂಡಿತು.
ಕರ್ಣಾಟಕ ಬ್ಯಾಂಕ್ ಪ್ರಧಾನ ಕಛೇರಿಯ ಡಿಜಿಎಂ ಗೋಪಾಲ ಕೃಷ್ಣ ಸಾಮಗ ಕ್ರೀಡಾಕೂಟ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಎಜಿಎಂ ವಾದಿರಾಜ್ ಕೆ. ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಿನ್ಸಿಪಾಲರಾದ ರಾಮಾರಾಯ ಆಚಾರ್ಯ, ಕುಂದಾಪುರ ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಉಪಾಧ್ಯ, ಉಡುಪಿ ಕ್ಲಸ್ಟರ್ ಹೆಡ್ ಪ್ರದೀಪ್ ಕುಮಾರ್, ಪ್ರಧಾನ ಕಚೇರಿಯ ಚೀಫ್ ಮ್ಯಾನೇಜರ್ ಕುಮಾರಸ್ವಾಮಿ, ಶ್ರೀನಿವಾಸ್ ಮೂರ್ತಿ, ಭಾರತೀ ಎಎಕ್ಸ್ಎ ರಿಲೇಶನ್’ಶಿಪ್ ಹೆಡ್ ಸಲೀಂ ಮೊಮೀನ್, ಬಜಾಜ್ ಅಲಾಯನ್ಸ್ ರಿಜಿನಲ್ ಮ್ಯಾನೇಜರ್ ಜಗದೀಶ್, ರಾಘವೇಂದ್ರ ನಾಯ್ಕ್, ಅಮರಾನಾಥ್ ಭಂಡಾರಿ, ಡಿಜಿಎಂ ರಾಕೇಶ್ ಕಾರಂತ್ ಉಪಸ್ಥಿತರಿದ್ದರು.
ಬ್ಯಾಂಕ್ ಸಿಬ್ಬಂದಿ ಗಾಯತ್ರಿ ಸಂತೋಷ ಪ್ರಾಥನೆ ನೆರವೇರಿಸಿ, ಗಣೇಶ್ ಹೊಳ್ಳ ಪ್ರಸ್ತಾವನೆಗೈದು ಸ್ವಾಗತಿಸಿದರು. ಶಿವಪ್ರಸಾದ್ ಧನ್ಯವಾದಗೈದರು. ಹೆಬ್ಬಾಡಿ ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು










