Site icon Kundapra.com ಕುಂದಾಪ್ರ ಡಾಟ್ ಕಾಂ

ಬೀಜಾಡಿ: ಮರಣಬಲೆ ಬಿಡಲು ಹೋಗಿದ್ದ ಯುವಕ ಸಮುದ್ರ ಪಾಲು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಹಳೆಅಳಿವೆ ಬಳಿ ಯುವಕ ಸಮುದ್ರದಲ್ಲಿ ಮರಣಬಲೆ ಬಿಡಲು ಹೋಗಿ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟಿದ್ದಾರೆ. ಮೃತ ಯುವಕ ಬೀಜಾಡಿ ಪೆಟ್ಟಿ ಮನೆ ಕುಮಾರ್‌ ಅವರ ಪುತ್ರ ಮೇಘರಾಜ್ (24)ಎಂದು ಗುರುತಿಸಲಾಗಿದೆ.

ಅವರು ಬೆಳಗ್ಗೆ ಹಳೆ ಅಳಿವೆ ಬಳಿ ಸಮುದ್ರದಲ್ಲಿ ಮರಣಬಲೆ ಬಿಡಲೆಂದು ಹೋದ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ನೀರುಪಾಲಾಗಿದ್ದಾರೆ. ಸಂಜೆ ವೇಳೆ ಬೀಜಾಡಿ ಸಮೀಪ ಕಡಲ ಎಡಭಾಗದಲ್ಲಿ ಮೃತದೇಹ ದಡ ಸೇರಿದೆ. ಸ್ಥಳಕ್ಕಾಗಮಿಸಿದ ಕರಾವಳಿ ಕಾವಲು ಪಡೆಯ ಸುದರ್ಶನ್ ಎಸ್. ಕುಂದರ್, ಕೃಷ್ಣ ಕಾಂಚನ್, ಸಂತೋಷ್ ಪೂಜಾರಿ, ಸುಧಾಕರ್ ಖಾರ್ವಿ ಅವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಈ ಬಗ್ಗೆ ಕುಂದಾಪುರ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version