Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಕಂಪೌಂಡ್‌ಗೆ ಬೈಕ್ ಢಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಬೈಕೊಂದು ನಿಯಂತ್ರಣ ತಪ್ಪಿ ಕಂಪೌಂಡ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಮೀಪದ ಮೊವಾಡಿ ಸಮೀಪ ಸಂಭವಿಸಿದೆ. ಮೊವಾಡಿ ನಿವಾಸಿ ಕೃಷ್ಣ ಮೊಗವೀರ ಅವರ ಪುತ್ರ ನಿತಿನ್ ಮೊಗವೀರ (26) ಮೃತ ಯುವಕ.

ಮೃತ ನಿತಿನ್ ಭಾನುವಾರ ರಾತ್ರಿ 8 ಗಂಟೆಯ ಸುಮಾರಿಗೆ ತನ್ನ ತಂಗಿಯನ್ನು ಬೈಕಿನಲ್ಲಿ ಕುಂದಾಪುರದ ಬಸ್ ಸ್ಟ್ಯಾಂಡ್‌ಗೆ ಬಿಟ್ಟು ಮನೆಗೆ ಹಿಂತಿರುಗುವಾಗ ಈ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Exit mobile version