ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಕೊಂದು ನಿಯಂತ್ರಣ ತಪ್ಪಿ ಕಂಪೌಂಡ್ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಮೀಪದ ಮೊವಾಡಿ ಸಮೀಪ ಸಂಭವಿಸಿದೆ. ಮೊವಾಡಿ ನಿವಾಸಿ ಕೃಷ್ಣ ಮೊಗವೀರ ಅವರ ಪುತ್ರ ನಿತಿನ್ ಮೊಗವೀರ (26) ಮೃತ ಯುವಕ.
ಮೃತ ನಿತಿನ್ ಭಾನುವಾರ ರಾತ್ರಿ 8 ಗಂಟೆಯ ಸುಮಾರಿಗೆ ತನ್ನ ತಂಗಿಯನ್ನು ಬೈಕಿನಲ್ಲಿ ಕುಂದಾಪುರದ ಬಸ್ ಸ್ಟ್ಯಾಂಡ್ಗೆ ಬಿಟ್ಟು ಮನೆಗೆ ಹಿಂತಿರುಗುವಾಗ ಈ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ವಂಡ್ಸೆ ಸಮೀಪದ ರಸ್ತೆಯಲ್ಲಿ ನಡೆದ ಟಿಪ್ಪರ್ ಹಾಗೂ ಸ್ಕೂಟರ್ ನಡುವಿನ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಸ್ಕೂಟರ್ ಸವಾರ ರಾಜು ಮೊಗವೀರ ಮೃತ ದುರ್ದೈವಿ. ವಂಡ್ಸೆ ಕಡೆಯಿಂದ ಬೆಳ್ಳಾಲ ಕಡೆಗೆ ತೆರಳುತ್ತಿದ್ದ ಟಿಪ್ಪರ್, ವಂಡ್ಸೆ ಕಡೆಗೆ ತೆರಳುತ್ತಿದ್ದ ರಾಜು ಮೊಗವೀರ ಎಂಬುವವರ ಸ್ಕೂಟರಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮೇ.15: ಮೋಟರ್ ಸೈಕಲ್ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬಳ್ಕೂರಿನ ಗುಲ್ವಾಡಿ ಡ್ಯಾಮ್ ಸಮೀಪ ಮಂಗಳವಾರ ಸಂಜೆ ನಡೆದಿದೆ. ಬಳ್ಕೂರು ಬಸವ ಪೂಜಾರಿ (55) ಮೃತ ದುರ್ದೈವಿ. ಕಂಡ್ಲೂರು ಯಿಂದ ಬಸ್ರೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಟಿಪ್ಪರ್ ಲಾರಿ ಬಸ್ರೂರುಯಿಂದ ಬಳ್ಕೂರು ಕಡೆಗೆ ಹೋಗುತ್ತಿದ್ದ ಟಿವಿಎಸ್ ಮೋಟರ್ ಸೈಕಲ್ಗೆ ನೇರ ಡಿಕ್ಕಿ ಹೊಡೆದಿದ್ದು, ವ್ಯಕ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಬೈಕ್ ಪಲ್ಟಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಟ ರಾ.ಹೆ – 66ರ ಬಸ್ ನಿಲ್ದಾಣದ ಹತ್ತಿರ ಮಂಗಳವಾರ ನಡೆದಿದೆ. ಮಣೂರು ನಿವಾಸಿ ಸುರೇಶ್ ಆಚಾರ್ಯ ಅವರ ಮಗ ವಿಕಾಸ್ ಆಚಾರ್ಯ (22) ಮೃತ ದುರ್ದೈವಿ ಬೆಳಿಗ್ಗೆ ಕೋಟ ಮಣೂರು ಕಡೆ ಬರುತ್ತಿದ್ದ ವೇಳೆ ಬಸ್ ನಿಲ್ದಾಣ ಸಮೀಪ ಬೈಕ್ ಸವಾರನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಯುವಕ ಸ್ಥಳದಲ್ಲೇ…