Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಟದ ಹಂದಟ್ಟು ಪರಿಸರದ ಚಿತ್ರಕಲಾವಿದ ಪುನಿತ್ ಪೂಜಾರಿ ಕೈಯಲ್ಲರಳಿದ ವೀರಚಂದ್ರಹಾಸ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಕೋಟದ ಹಂದಟ್ಟು ಪರಿಸರದ ಚಿತ್ರಕಲಾವಿದ ಪುನಿತ್ ಪೂಜಾರಿ  ಅಶ್ವಥ ಎಲ್ಲೆಯ ಮೂಲಕ ಬಿಡಿಸಿದ ವೀರಚಂದ್ರಹಾಸ ಯಕ್ಷಚಿತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಇದೇ ಬರುವ ಎ. 18 ರಂದು ತೆರೆಕಾಣಲಿರುವ ಹಾಗೂ ಕನ್ನಡ ಚಿತ್ರರಂಗದಲ್ಲೆ ಮೊಟ್ಟ ಮೊದಲ ಬಾರಿಗೆ ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಪರಿಚಯಿಸುಲು ಮಂದಾದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ನಿರ್ದೇಶನದ ಈ ಯಕ್ಷ ಚಿತ್ರ ವೀರಚಂದ್ರಹಾಸ ಕಲಾವಿದ ಪುನಿತ್ ಅಶ್ವಥ ಮರದ ಎಲೆಯಲ್ಲಿ ವಿಶಿಷ್ಠ ರೀತಿಯಲ್ಲಿ ಬಿಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದೆ ಅಲ್ಲದೆ ರವಿ ಬಸ್ರೂರ್ ಇವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Exit mobile version