Kundapra.com ಕುಂದಾಪ್ರ ಡಾಟ್ ಕಾಂ

ಕೋಟ: ಓಂ ಸ್ಟಾರ್ ಫ್ರೆಂಡ್ಸ್ ರಜತ ಸಂಭ್ರಮ, ಸಾಧಕರಿಗೆ ಸನ್ಮಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಕೋಟದ ಗೊಬ್ಬರಬೆಟ್ಟು ಓಂ ಸ್ಟಾರ್ ಫ್ರೆಂಡ್ಸ್  ಇದರ ರಜತ ಮಹೋತ್ಸವದ ಅಂಗವಾಗಿ ಸಾಧಕರಿಗೆ ಸನ್ಮಾನ, ಅಶಕ್ತರಿಗೆ ನೆರವು, ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಇತ್ತೀಚಿಗೆ ಗೊಬ್ಬರಬೆಟ್ಟು ಪರಿಸರದಲ್ಲಿ ಜರಗಿತು.

ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಿದರು.

ಇದೇ ವೇಳೆ ಕೋಟ ಶಾಲೆಯ ಅಂಗನವಾಡಿ ಶಿಕ್ಷಕಿ ಕಮಲ ಟೀಚರ್, ನಿವೃತ್ತ ಶಿಕ್ಷಕ, ಸಾಹಿತಿ ವಿಠ್ಠಲ್ ವಿ. ಗಾವ್ಕಂರ್, ಹಿರಿಯ ಕೃಷಿಕ ವೈಕುಂಠ ಹಂದೆ ಅವರುಗಳಿಗೆ ನಮ್ಮೂರ ಸಾಧಕರಿಗೆ ನಮ್ಮೂರ ಹಿರಮೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಶಾಸಕ ಕಿರಣ್ ಕುಮಾರ್ ಕೊಡ್ಗಿ ಸನ್ಮಾನ ಕಾರ್ಯಕ್ರಮ ನೆರವೆರಿಸಿದರು. ಸಭೆಯ ಅಧ್ಯಕ್ಷತೆಯನ್ನು ಓಂ ಸ್ಟಾರ್ ಫ್ರೆಂಡ್ಸ್ ಅಧ್ಯಕ್ಷ ನಾಗೇಶ್ ಪೂಜಾರಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ  ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಕುಂದರ್, ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜಗದೀಶ್, ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಕೋಟ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಜಿ. ಸದಾನಂದ ಪೂಜಾರಿ, ರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಸಮಿತಿ ಪ್ರದಾನಕಾರ್ಯದರ್ಶಿ ದಿನೇಶ್ ಗಾಣಿಗ, ಕೋಟತಟ್ಟು ಗ್ರಾ.ಪಂ ಸದಸ್ಯ ವಾಸು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಓಂ ಸ್ಟಾರ್ ಫ್ರೆಂಡ್ಸ್ ಗೌರವ ಸಲಹೆಗಾರ ಎಚ್. ಪ್ರಮೋದ್ ಹಂದೆ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಮಂಜುನಾಥ್ ನಿರೂಪಿಸಿದರು. ಸದಸ್ಯ ಮಂಜುನಾಥ್ ಆಚಾರ್  ಸಹಕರಿಸಿದರು.

Exit mobile version