Site icon Kundapra.com ಕುಂದಾಪ್ರ ಡಾಟ್ ಕಾಂ

ನಿಸ್ವಾರ್ಥ ಸೇವಾ ಟ್ರಸ್ಟ್‌ನ ಅಶಕ್ತರಿಗೆ ನೆರವು ಮಹಾತ್ಕಾರ್ಯ ಶ್ಲಾಘನೀಯ: ರವೀಂದ್ರ ಕೋಟ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ನಿಸ್ವಾರ್ಥ ಸೇವಾ ಟ್ರಸ್ಟ್ ಹೆಸರಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ, ಸಮಾಜದ ಬಡ ಹಾಗೂ ಅನಾರೋಗ್ಯ ಪೀಡಿತರ ನೆರವಿಗೆ ಧಾವಿಸುವ ಜೊತೆಗೆ ಯಾವುದೇ ಪ್ರಚಾರದ ಗೀಳು ಇಲ್ಲದೆ ಪ್ರತಿ ತಿಂಗಳು ಸಹಾಯದ ನೆರವು ನೀಡುತ್ತಿದ್ದಾರೆ ಇದೊಂದು ಶ್ರೇಷ್ಠವಾದ ಮಹತ್ಕಾರ್ಯವಾಗಿದೆ ಎಂದು ಪತ್ರಕರ್ತ ರವೀಂದ್ರ ಕೋಟ ಪ್ರಶಂಸನೀಯ ಮಾತುಗನ್ನಾಡಿದರು.

ಅವರು ಕೋಟದ ನಿಸ್ವಾರ್ಥ ಸೇವಾ ಟ್ರಸ್ಟ್ ತಿಂಗಳ ಸರಣಿ ಸಹಾಯಹಸ್ತ ಯೋಜನೆಯಡಿ ಕೋಟದಲ್ಲಿ ವಾಸ್ತವ್ಯವಿರುವ ಬಡ ಕುಟುಂಬದ ವಿಜಯಲಕ್ಷ್ಮೀ ಶಾಸ್ತ್ರಿ ಅವರಿಗೆ ದಿನಸಿ ಪರಿಕರ ಹಸ್ತಾಂತರಿಸಿ ಮಾತನಾಡಿದರು. ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ನೆರವು ನೀಡುವ ಕಾರ್ಯ ಭಗವಂತನಿಗೆ ಅತಿ ಹತ್ತಿರವಾದ ಕಾರ್ಯವಾಗಿದೆ ಈ ದಿಸೆಯಲ್ಲಿ ನಿಸ್ವಾರ್ಥ ಸೇವಾ ಟ್ರಸ್ಟ್ ನಂತೆ ಒಂದಿಷ್ಟು  ಒಂದಿಷ್ಟು ಸಂಘಟನೆಗಳು ಕಾರ್ಯಾಚರಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕಿ ಸವಿತಾ ವೆಂಕಟೇಶ ಉಡುಪ, ನಿಸ್ವಾರ್ಥ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕೋಟ, ಕಾರ್ಯದರ್ಶಿ ಪ್ರದೀಪ್ ಪೂಜಾರಿ ಕೋಟ, ಟ್ರಸ್ಟ್ ಪ್ರಮುಖರಾದ ಗೋಪಿನಾಥ್ ಕಿಣಿ ಮತ್ತಿತರರು ಇದ್ದರು.

ಕೋಟದ ನಿಸ್ವಾರ್ಥ ಸೇವಾ ಟ್ರಸ್ಟ್ ತಿಂಗಳ ಸರಣಿ ಸಹಾಯಹಸ್ತ ಯೋಜನೆಯಡಿ ಕೋಟದಲ್ಲಿ ವಾಸ್ತವ್ಯವಿರುವ ಬಡ ಕುಟುಂಬದ ವಿಜಯಲಕ್ಷ್ಮೀ ಶಾಸ್ತ್ರಿ ಅವರಿಗೆ ದಿನಸಿ ಪರಿಕರವನ್ನು ಸಮಾಜಸೇವಕಿ ಸವಿತಾ ವೆಂಕಟೇಶ ಉಡುಪ, ಪತ್ರಕರ್ತ ರವೀಂದ್ರ ಕೋಟ ಹಸ್ತಾಂತರಿಸಿದರು.

ನಿಸ್ವಾರ್ಥ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕೋಟ, ಕಾರ್ಯದರ್ಶಿ ಪ್ರದೀಪ್ ಪೂಜಾರಿ ಕೋಟ, ಟ್ರಸ್ಟ್ ಪ್ರಮುಖರಾದ ಗೋಪಿನಾಥ್ ಕಿಣಿ, ಕಿರಣ್ ಕುಮಾರ್ ಮತ್ತಿತರರು ಇದ್ದರು,

Exit mobile version