ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ಚರ ಕಲಾರಂಗ ಕೋಟ ಇದರ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವು ಇದೇ ಬರುವ ಎ.26ರಂದು ಕೋಟ ಮಹಾಲಿಂಗೇಶ್ವರ ದೇಗುಲದ ವಠಾರದಲ್ಲಿ ನಡೆಯಲಿದ್ದು ಇದರ ಪೋಸ್ಟರ್ ಬಿಡುಗಡೆಯನ್ನು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಯಕ್ಷಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾ ರಂಗದ ಅಧ್ಯಕ್ಷ ರಾಘವೇಂದ್ರ ಕರ್ಕೇರ ಕೋಡಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ರಾಜು ಪೂಜಾರಿ ಕಾರ್ಕಡ, ಪ್ರಗತಿಪರ ಕೃಷಿಕ ರವೀಂದ್ರ ಐತಾಳ್, ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಶಿವಾನಂದ ಮಯ್ಯ, ನಿವೃತ್ತ ಶಿಕ್ಷಕ ಕೆ. ರಾಜಾರಾಮ ಐತಾಳ್, ಯಕ್ಷ ಸೌರಭದ ಕಾರ್ಯದರ್ಶಿ ಶ್ರೀನಾಥ್ ಉರಾಳ, ಸ್ಥಾಪಕಾಧ್ಯಕ್ಷ ಹರೀಷ್ ಭಂಢಾರಿ, ಸದಸ್ಯರಾದ ಗಿರೀಶ್ ಬೆಟ್ಲಕ್ಕಿ, ಪ್ರಶಾಂತ್ ಪಡುಕರೆ, ವಿಘ್ನನೇಶ್ ದೇವಾಡಿಗ, ಕೋಟ ಅಮೃತೇಶ್ವರಿ ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ ಮತ್ತಿತರರು ಇದ್ದರು.

