Kundapra.com ಕುಂದಾಪ್ರ ಡಾಟ್ ಕಾಂ

ಸೂಲ್ಪಡು ಮಡಿವಾಳಸಾಲು ಹೊಳೆ ಹೊಳುತ್ತದಿದ್ದರೆ ಬಹಿರಂಗ ಪ್ರತಿಭಟನೆಗೆ ರೈತಧ್ವನಿ ಸಜ್ಜು

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆದೂರು ವ್ಯಾಪ್ತಿಯಿಂದ ಕೋಟ ಗ್ರಾ.ಪಂ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸೂಲ್ಪಡು ಮಡಿವಾಳಸಾಲು ಹೊಳೆ ಹೂಳು ಸಮಸ್ಯೆಗೆ ಶೀಘ್ರದಲ್ಲಿ ಟೆಂಡರ್ ಪ್ರಕ್ರೀಯೆ ಪೂರ್ಣಗೊಳಿಸಿ ಈ ವರ್ಷದ ಮಳೆಗಾಲದ ಆರಂಭಕ್ಕೂ ಮೊದಲು ಹೂಳೆ ಹೂಳು ತೆಗೆಯಬೇಕೆಂದು ರೈತಧ್ವನಿ ಸಂಘದ ಪ್ರಮುಖರಾದ ಟಿ. ಮಂಜುನಾಥ್ ಗಿಳಿಯಾರ್ ಆಗ್ರಹಿಸಿದರು.

ಅವರು ಕೋಟದ ಅಮೃತೇಶ್ವರಿ ದೇಗುಲದಲ್ಲಿ ಕೋಟದ ರೈತಧ್ವನಿ ಸಂಘಟನೆ ಸಭೆಯಲ್ಲಿ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ತೆಕ್ಕಟ್ಟೆ ಉಳ್ಳೂರು, ಬೇಳೂರು, ಗಿಳಿಯಾರು, ಕಾರ್ತಟ್ಟು, ಚಿತ್ರಪಾಡಿ, ಬನ್ನಾಡಿ, ಉಪ್ಪಾಡಿ, ಸಾಲಿಗ್ರಾಮ ವ್ಯಾಪ್ತಿಯ ರೈತರು ಕೃತಕ ನೆರೆ ಹಾವಳಿಗೆ ತುತ್ತಾಗುತ್ತಿರುವ ಹಿನ್ನಲ್ಲೆಯಲ್ಲಿ ಕಳೆದ ಸಾಕಷ್ಟು ವರ್ಷಗಳಿಂದ ರೈತಧ್ವನಿ ಹೋರಾಟ ನಡೆಸಿದ್ದು ಪ್ರಸ್ತುತ ರಾಜ್ಯ ಸರಕಾರ ವಾರಾಹಿ ಯೋಜನೆಯಡಿ ಹೊಳೆ ಹೂಳೆ ತೆಗೆಯುವ ಸಂಬಂಧಿಸಿದ ಈಗಾಗಲೇ 4.5ವರೆ ಕೋಟಿ ಮಿಸಲಿರಿಸಿ ಟೆಂಡರ್ ಪ್ರಕೀಯೆ ಬಾಕಿ ಇರಿಸಿದೆ ಈ ಬಗ್ಗೆ  ರೈತರು ಈ ವರ್ಷದ ಮಳೆಗಾಲದೊಳಗೆ ಹೊಳೆ ಹೂಳಿನಿಂದ ಮುಕ್ತಗೊಳಿಸಿ ಕೃಷಿ ಕಾಯಕಕ್ಕೆ ಅನೂಲಕರ ವಾತಾವರಣ ಸೃಷ್ಠಿಯಾಗಬೇಕು, ಒಂದೊಮ್ಮೆ ವಿಳಂಬವಾದರೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ರೈತಧ್ವನಿ ಪ್ರತಿಭಟನೆ ಕೂರುವುದಾಗಿ ಎಚ್ಚರಿಸಿದರು.

ಅಲ್ಲದೆ ಕೆಲವೊಂದು ವ್ಯಕ್ತಿಗಳು ರಾಜಕೀಯ ಹಿತಾಸಕ್ತಿಯ ಮೂಲಕ ರೈತಸಮುದಾಯವನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ರೈತಧ್ವನಿ ಸಭೆಯಲ್ಲಿ ಆಕ್ಷೇಪಿಸಿ ಡೊಂಬರಾಟದ ಹೋರಾಟದ ಬಗೆ ಬಿಟ್ಟು ರೈತ ಸಮುದಾಯ ಒಗ್ಗಟ್ಟಿನಿಂದ ಹೋರಾಟದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಿದೆ ಎಂದು ಟಿ.ಮಂಜುನಾಥ್ ಗಿಳಿಯಾರ್ ನುಡಿದರು.

ಒಂದೆರಡು ದಿನದಲ್ಲಿ ನಿಯೋಗ ಭೇಟಿ:
ಬೆಳಗಾವಿ ಅಧಿವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮ್ಮುಖದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಹೊಳೆ ಸಾಲು ಹೂಳೆತ್ತುವ ಸಂಬಂಧ 4.5 ಕೋಟಿ ರೂಗೆ ಅಂಕಿತ ಹಾಕಿದ್ದು ಇದರ ಪ್ರಕ್ರಿಯೆ ನಡೆಯುತ್ತಿದೆ ಇದಕ್ಕೆ ಸಂಬಂಧಿಸಿದ ಸ್ವಲ್ಪ ವಿಳಂಬವಾಗಿರಬಹುದು ಆದರೂ ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ರೈತಮುಖಂಡರ ನಿಯೋಗ ಬೆಂಗಳೂರಿಗೆ ತೆರಳಿ ಆಗ್ರಹಿಸಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಅಲ್ಲದೆ ಶೀಘ್ರ ಕುಂದಾಪುರ ವಿಧಾನಸಭಾ ಕ್ಷೇತ್ರದ ಮುಖಂಡರಾದ ದಿನೇಶ್ ಮೊಳಹಳ್ಳಿ ಹಾಗೂ ಶಾಸಕರು,ಸಂಸದರನ್ನು ಸಂಪರ್ಕಿಸಲು ರೈತಧ್ವನಿ ಸಂಘದ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ಸಭೆಯಲ್ಲಿ ಸೂಚಿಸಿದರು.

ರೈತ ಪರ ಹೆಸರಿಟ್ಟುಕೊಂಡು ರಾಜಕಾರಣಗೊಳಿಸುವುದು ಪ್ರಸ್ತುತ ವ್ಯವಸ್ಥೆಯಲ್ಲಿ ಸೂಕ್ತವಲ್ಲ ಬದಲಾಗಿ ರೈತರು ಅನ್ನೋರಿಗೆ ಪಕ್ಷಬೇಧವಿಲ್ಲ, ಕೃತಕ ನೆರೆಯಿಂದ ಎಲ್ಲಾ ಜನರಿಗೂ ತೊಂದರೆ, ಹಾಗಾಗಿ ರೈತಪರ ಹೋರಾಟದಲ್ಲಿ ರಾಜಕೀಯ ಮಾಡಬಾರದು , ಪಕ್ಷಭೇಧ ಮರೆತು ರೈತ ಪರವಾಗಿ ಹೋರಾಟಕ್ಕಿಳಿಯಬೇಕಾಗಿದೆ ಎಂದು ರೈತಧ್ವನಿ ಸಂಘದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ರೈತಧ್ವನಿ ಸಂಘದ ಪ್ರಮುಖರಾದ ತಿಮ್ಮ ಪೂಜಾರಿ, ವಿಜಯ ಕುಂದರ್, ಬಾಬು ಶೆಟ್ಟಿ, ಹಂಡಿಕೆರೆ ರಾಘವೇಂದ್ರ ಶೆಟ್ಟಿ, ಸುಭಾಷ್ ಶೆಟ್ಟಿ, ನಾಗರಾಜ್ ಗಾಣಿಗ ಸಾಲಿಗ್ರಾಮ, ಮಹಾಬಲ ಪೂಜಾರಿ, ತಿಮ್ಮ ಕಾಂಚನ್, ದಿನೇಶ್ ಪೂಜಾರಿ, ಶೀಲರಾಜ್ ಕಾಂಚನ್, ಜಗನಾಥ ಕಾಂಚನ್, ಪ್ರಕಾಶ್ಚಂದ್ರ ಶೆಟ್ಟಿ, ರಾಮಣ್ಣ ಶೆಟ್ಟಿ, ಭುಜಂಗ ಗುರಿಕಾರ, ಗೋಪಾಲ ಬಂಗೇರ, ಗಿರೀಶ್ ಗಾಣಿಗ ಬೆಟ್ಲಕ್ಕಿ, ಗುರುರಾಜ್ ಆಚಾರ್ ಇದ್ದರು. ಚಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

Exit mobile version