ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಮಾಜದ ಒಳಿತಿಗಾಗಿ ಸಮಾಜಕ್ಕೊಸ್ಕರ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಆನಂದ್ ಸಿ. ಕುಂದರ್ ಕರಾವಳಿಯ ಕಲ್ಪತರು ಆಗಿದ್ದಾರೆ ಎಂದು ಉಡುಪಿಯ ಹೊಸಬದುಕು ಆಶ್ರಮದ ಮುಖ್ಯಸ್ಥ ಹ.ರಾ ವಿನಯಚಂದ್ರ ಸಾಸ್ತಾನ ನುಡಿದರು.
ಅವರು ಜನತಾ ಸಂಸ್ಥೆಯಲ್ಲಿ ಆನಂದ್ ಸಿ ಕುಂದರ್ 77ನೇ ವರ್ಷಾಚರಣೆ ಅಂಗವಾಗಿ ಗೀತಾನಂದ ಫೌಂಡೇಶನ್ ವತಿಯಿಂದ ಸುಮಾರು 25 ಲಕ್ಷಕ್ಕೂ ಅಧಿಕ ರೂಗಳನ್ನು ವಿವಿಧ ಆಶ್ರಮಕ್ಕೆ, ಅಶಕ್ತರಿಗೆ ಅನಾರೋಗ್ಯ ಪೀಡಿತರಿಗೆ ನೆರವು ಕಾರ್ಯದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡವರ ಬಗ್ಗೆ ಅಶಕ್ತರಿಗೆ ತುಡಿಯುವ ಮನಸ್ಥಿತಿ ಅಪರೂಪದಲ್ಲಿ ಅಪರೂಪವಾಗಿದೆ. ಆನಂದ್ ಸಿ ಕುಂದರ್ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದ್ದು ಅತ್ಯಂತ ಶ್ಲಾಘನಾರ್ಹ ಕಾರ್ಯವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದೇ ವೇಳೆ ಉಡುಪಿಯ ಹೊಸಬದುಕು, ಬ್ರಹ್ಮಾವರದ ಅಪ್ಪ ಅಮ್ಮ ಆಶ್ರಮ, ಮಾನಸ ಜ್ಯೋತಿ ವಿಶೇಷಚೇತನ ಶಾಲೆ, ಬ್ರಹ್ಮಾವರದ ವಿಜಯ ಬಾಲನಿಕೇತನ ಸೇರಿದಂತೆ ಒಟ್ಟು 11 ಆಶ್ರಮ ಹಾಗೂ 15ಕ್ಕೂ ಅಧಿಕ ಅನಾರೋಗ್ಯ, ಆಶಕ್ತರಿಗೆ ನೆರವಿನ ಚಕ್ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಜನತಾ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ ಕುಂದರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ನಿರ್ವಹಿಸಿದರು.

