Site icon Kundapra.com ಕುಂದಾಪ್ರ ಡಾಟ್ ಕಾಂ

ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಡಾ. ಬಿ.ಬಿ. ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಿಂದ ಕಡಲ ತೀರದ ಸ್ವಚ್ಛತೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ನೇಚರ್ ಕ್ಲಬ್ ಜಂಟಿ ಆಶ್ರಯದಲ್ಲಿ ರೀಫ್ ವಾಚ್ ಮರೈನ್ ಸಂಸ್ಥೆ ಸಹಯೋಗದೊಂದಿಗೆ ಎಚ್. ಸಿಎಲ್ ಫೌಂಡೇಶನ್ ಹಾಗೂ ಸ್ಥಳೀಯ ಭಜನಾ ಮಂಡಳಿ ಮತ್ತು ಮೀನುಗಾರರ ಸಹಕಾರದೊಂದಿಗೆ ವಿಶ್ವ ಭೂಮಿಯ ದಿನ ಆಚರಣೆಯ ಅಂಗವಾಗಿ ಕಂಚುಗೋಡಿನ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ರೀಫ್ ವಾಚ್ ಸಂಸ್ಥೆಯವರು ತೇಲುವ ತುಂಡು ಬಲೆಗಳಿಂದ ಸಮುದ್ರ ಮತ್ತು ಭೂಮಿಯ ಮೇಲಿರುವ ಪ್ರಾಣಿ ಪಕ್ಷಿಗಳು ಸಿಕ್ಕಿಹಾಕಿ ಸಾಯುವುದನ್ನು ತಡೆಯಲು ಮತ್ತು ಪರಿಸರ ಸಂರಕ್ಷಣೆಗಾಗಿ ಕಡಲ ತೀರದಲ್ಲಿ ಕಸದಂತೆ ಬಿದ್ದಿದ ರಾಶಿ ರಾಶಿ ನಿರೂಪಯುಕ್ತ ಬಲೆಗಳನ್ನು ಖರೀದಿಸಿದರು.

ವಿಶ್ವ ಭೂಮಿ ದಿನ ಆಚರಣೆಯ ಪ್ರಸಿದ್ಧ ಘೋಷಣೆಯಾದ ಕಡಿಮೆ ಮಾಡಿ, ಮರುಬಳಕೆ ಮಾಡಿ ಎಂಬ ಘೋಷಣೆಯಂತೆ ತುಂಡು ವ್ಯರ್ಥ ಬಲೆಯಿಂದ ತಯಾರಿಸಿದ ಅತ್ಯುತ್ತಮ ಬೆಂಚ್ ಟೇಬಲ್ ಮತ್ತು ಬ್ಯಾಗ್‌ಳನ್ನು ಸಮುದಾಯದ ಬಳಕೆಗಾಗಿ ಕಂಚುಗೋಡಿನ ಕಡಲ ತೀರದಲ್ಲಿ ಹಾಕಿಸಿ ಅದನ್ನು ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯಕ್ ಉದ್ಘಾಟಿಸಿದರು.

ರೀಫ್ ವಾಚ್ ಮರೈನ್ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಅರ್ಪಿತ್ ದತ್ತ ಕಡಲಾಮೆ ಸಂರಕ್ಷಣೆ ಹಾಗೂ ಕಡಲ ಸ್ವಚ್ಛತೆ ಕುರಿತು ಮಾತನಾಡಿದರು.

ಕಾಲೇಜಿನ ರಾಷ್ಟಿçÃಯ ಸೇವಾ ಯೋಜನ ಘಟಕ IIರ  ಕಾರ್ಯಕ್ರಮ ಅಧಿಕಾರಿ ದೀಪ ಪೂಜಾರಿ, ನೇಚರ್ ಕ್ಲಬ್ ಸಂಯೋಜಕ ಸತೀಶ್ ಕಾಂಚನ್, ಶ್ರೀರಾಮ ಭಜನಾ ಮಂದಿರಾ ಕಂಚುಗೋಡು ಅಧ್ಯಕ್ಷ ನಾಗೇಶ್ ಖಾರ್ವಿ, ವಿಶ್ವನಾಥ್ ಖಾರ್ವಿ, ನಾಗರಾಜ ಖಾರ್ವಿ, ರಮೇಶ್ ಖಾರ್ವಿ, ಉರಗ ತಜ್ಞ ನಾಗರಾಜ ಖಾರ್ವಿ ಹಾಗೂ ಕಂಚುಗೋಡು ಭಾಗದ ಮೀನುಗಾರರು, ಎನ್.ಎಸ್.ಎಸ್. ಸ್ವಯಂ ಸೇವಕರು ಉಪಸ್ಥಿತರಿದ್ದರು.

ಪ್ರಕಾಶ್ ಖಾರ್ವಿ ಸ್ವಾಗತಿಸಿ, ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಡಾ| ಪ್ರಶಾಂತ್ ಕಾರ್ಯಕ್ರಮ ಸಂಯೋಜಿಸಿ, ವೆಂಕಟೇಶ್ ಶೇರೆಗಾರ್ ನಿರೂಪಿಸಿ, ವಂದಿಸಿದರು.

Exit mobile version