ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೃಷಿ ಉತ್ಪಾದನೆ ಹೆಚ್ಚಿಸುವ ಕಾರ್ಯಕ್ರಮಗಳು ಆಗಾಗ ನಡೆಯಬೇಕು ಈ ಮೂಲಕ ಕೃಷಿ ಆದಾಯ ದ್ವಿಗುಣಗೊಳ್ಖಬೇಕು ಎಂದು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಬಿದ್ ಗುದ್ಯಾಳ್ ನುಡಿದರು.
ಅವರು ಭಾನುವಾರ ಕೋಟದ ಗಾಂಧಿ ಮೈದಾನದಲ್ಲಿ ಸಂಸ್ಕ್ರತಿ ಸಂಭ್ರಮ ಟ್ರಸ್ಟ್ ಕೋಟ ಕುಂದಾಪುರ, ವಿಧಾತ್ರಿ ರೈತ ಉತ್ಪಾದಕ. ಸಂಸ್ಥೆ ಕೋಟ, ಗೀತಾನಂದ ಫೌಂಡೇಶನ್ ಮಣೂರು, ಕೋಟ ಸಹಕಾರಿ ವ್ಯವಸಾಯಕ ಸಂಘ ಇವರುಗಳ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ಹಲಸು ಮತ್ತು ಮಾವು ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕೃಷಿ ಉತ್ಸವಗಳು ಕೃಷಿಗೆ ಪೂರಕ ವಾತಾವರಣವನ್ನು ಕಲ್ಪಿಸುತ್ತದೆ ಈ ದಿಸೆಯಲ್ಲಿ ಇಂತಹ ಕಾರ್ಯಕ್ರಮಗಳು ಎಲ್ಲಾ ಭಾಗದಲ್ಲಿ ಹೆಚ್ಚು ನಡೆಯಬೇಕು ಎಂದರು.
ಇದೇ ವೇಳೆ ಸ್ಥಳೀಯ ರೈತ ಸಾಧಕರಾದ ಒಳಮಾಡು ಆನಂದ ಮರಕಾಲ, ಚಂದ್ರಶೇಖರ್ ಗಾಣಿಗ, ನಿಶಾ ದೇವಾಡಿಗ ಬೇಳೂರು ಅವರುಗಳನ್ನು ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಕ್ರತಿ ಸಂಭ್ರಮ ಟ್ರಸ್ಟ್ ನ ಶ್ರೀಧರ ಮರವಂತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ಟಿ. ಮಂಜುನಾಥ್ ಗಿಳಿಯಾರು, ಎ.ಪಿ ಎಂ ಸಿ ಮಾಜಿ ಉಪಾಧ್ಯಕ್ಷ ಕೃಷ್ಣ ಪೂಜಾರಿ ಪಿ., ವಿಧಾತ್ರಿ ಸಂಸ್ಥೆಯ ಅಧ್ಯಕ್ಷ ಶ್ರಾವಿತ್ ಎನ್. ಶೆಟ್ಟಿ , ಸಂಸ್ಕ್ರತಿ ಸಂಭ್ರಮ ಟ್ರಸ್ಟ್‌ನ ಸದಸ್ಯರಾದ ಇಬ್ರಾಹಿಂ ಬ್ಯಾರಿ, ಸತೀಶ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹಲಸು ಮಾವು ಮೇಳದ ಸಂಘಟಕ ರಮೇಶ್ ಮೆಂಡನ್ ಸಾಲಿಗ್ರಾಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಕೃಷಿ ಮತ್ತು ತೋಟಗಾರಿಕಾ ಇಲಾಖೆ, ಕೃಷಿ ಸಂಶೋಧನಾ ಕೇಂದ್ರ ಬ್ರಹ್ಮಾವರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಡುಪಿ ಸಹಕಾರ ನೀಡಿತು.

