Site icon Kundapra.com ಕುಂದಾಪ್ರ ಡಾಟ್ ಕಾಂ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 3ನೇ ಸ್ಥಾನ ಪಡೆದ ನಿಧಿ ಪೈ ಗೆ ಸನ್ಮಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 623 /625 ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದ ನಿಧಿ ಪೈ ಅವರನ್ನು ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು.

ಗ್ರಾಮದ ಹಿರಿಯರಾದ ಎಂ. ವಿಷ್ಣುಮೂರ್ತಿ ಮಯ್ಯ ಅವರು ಆಕೆಯ ಸಾಧನೆಯನ್ನು ಕೊಂಡಾಡಿ ಪ್ರೋತ್ಸಾಹದ ಮಾತುಗಳನ್ನು ಹೇಳಿದರು. ಅಲ್ಲದೆ ತನ್ನ ವೈಯಕ್ತಿಕ ನೆಲೆಯಲ್ಲಿ ನಗದು ಪುರಸ್ಕಾರವನ್ನೂ ನೀಡಿದರು.

ಈ ವೇಳೆ ದೇವಳದ ವತಿಯಿಂದ ಶಾಲು ಹೊದೆಸಿ, ಫಲ ಪುಷ್ಪವನ್ನು ನೀಡಿ ಶ್ರೀ ದೇವರ ಗಂಧ ಪ್ರಸಾದವನ್ನು ನೀಡಿ ಗೌರವಿಸಲಾಯಿತು.

ಅದೇ ರೀತಿಯಲ್ಲಿ ವಿದ್ಯಾರ್ಥಿಯ ಪೋಷಕರನ್ನು ಕೂಡ ಗೌರವಿಸಲಾಯಿತು.

ನಿಧಿ ಪೈ ಮಣೂರಿನ ನಾರಾಯಣ ಪೈ ದಂಪತಿಗಳ ಸುಪುತ್ರಿಯಾಗಿದ್ದು ಸಭೆಯನ್ನು ಗಣ್ಯರು ವಿಶೇಷವಾಗಿ ಗುರುತಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸತೀಶ್ ಹೆಚ್. ಕುಂದರ್ ಹಾಗೂ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಮಹಾಲಿಂಗೇಶ್ವರ ಭಜನಾ ಮಂಡಳಿಯ ಸದಸ್ಯರು, ದೇವಳದ ಅರ್ಚಕರು ಉಪಸ್ಥಿತರಿದ್ದರು.

Exit mobile version