Site icon Kundapra.com ಕುಂದಾಪ್ರ ಡಾಟ್ ಕಾಂ

ಮೇ.15ರಂದು ಕೋಟದ ಛಾಯಾ ತರಂಗಿಣಿ ಸಂಗೀತ ಶಾಲೆ ದಶಮಾನೋತ್ಸವ ಸಂಭ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಛಾಯಾ ತರಂಗಿಣಿ ಸಂಗೀತ ಶಾಲೆ ಕೋಟ ಹರ್ತಟ್ಟು ಇದರ ದಶಮಾನೋತ್ಸವ ಸಂಭ್ರಮವು ಮೇ.15 ರಂದು ಕೋಟದ ಕಾರಂತ ಥೀಂ ಪಾರ್ಕ್‌ನಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಗುರುವಂದನಾ ಕಾರ್ಯಕ್ರಮದ ಅಂಗವಾಗಿ ವಿದ್ವಾನ್  ಮಧೂರು ಪಿ. ಬಾಲ ಸುಬ್ರಹ್ಮಣ್ಯಂ, ವಿದುಷಿ ಶರ್ಮಿಳ ರಾವ್ ಅವರುಗಳು ಗುರವಂದನಾ ಗೌರವ ಸ್ವೀಕರಿಸಲಿದ್ದಾರೆ.

ಅಧ್ಯಕ್ಷತೆಯನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಛಾಯಾ ತರಂಗಣಿ  ವಿವಿಧ ಶಾಖೆಯ ವಿದ್ಯಾರ್ಥಿಗಳಿಂದ ಗಾನ ನಮನ, ಅನಘಾ ಆರ್ ವಿ., ತನ್ಮಯ್ ಬಿಜೂರು, ವಿದ್ವಾನ್  ಮಧೂರು ಪಿ ಬಾಲಸುಬ್ರಹ್ಮಣ್ಯಂ ,ವಿದುಷಿ ಶರ್ಮಿಳ ರಾವ್ ಅವರಿಂದ ಕರ್ನಾಟ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಭಾಗೇಶ್ವರಿ ಜಿ. ಮಯ್ಯ ತಿಳಿಸಿದ್ದಾರೆ.

Exit mobile version