ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೇರಳದಿಂದ- ಕೊಲ್ಲೂರು ದೇವಸ್ಥಾನಕ್ಕೆ ಪ್ರವಾಸ ಹೊರಟ್ಟಿದ್ದ ಟಿ.ಟಿ. ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿದ ಘಟನೆ ಕೋಟ ಹೈಸ್ಕೂಲು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದೆ.
ವಾಹನವು ಬ್ಯಾರಿಕೇಡ್ ಡಿಕ್ಕಿಯಾಗಿ ಅನಂತರ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿದೆ. ವಾಹನದಲ್ಲಿ 13 ಪ್ರಯಾಣಿಸುತ್ತಿದ್ದರು ಚಾಲಕನಿಗೆ ಹೆಚ್ಚಿನ ಗಾಯವಾಗಿದೆ. ಮಿಕ್ಕುಳಿದವರು ಸಣ್ಣ-ಪುಟ್ಟ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಟೋಲ್‌ನ ಆ್ಯಂಬುಲೆನ್ಸ್ ಹಾಗೂ ಸಿಬಂದಿ ಮತ್ತು ಸ್ಥಳೀಯರು ಗಾಯಾನುಗಳನ್ನು ಆಸ್ಪತ್ರೆಗೆ ಸಾಗಿಸಿದರು.
ಕೋಟ ಪೋಲೀಸ್ ಠಾಣೆ ಉಪಸಿರೀಕ್ಷಕ ರಾಘವೇಂದ್ರ ಸಿ,. ಕ್ರೈಂ ವಿಭಾಗದ ಪಿ.ಎಸ್.ಐ. ಸುಧಾ ಪ್ರಭು ಸಿಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.
.

