Site icon Kundapra.com ಕುಂದಾಪ್ರ ಡಾಟ್ ಕಾಂ

ಕಾರ್ತಟ್ಟು ಶ್ರೀ ಅಘೋರೇಶ್ವರ ದೇವಸ್ಥಾನದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಾ. ಸುರೇಶ್ ಐತಾಳ್ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಸಾಲಿಗ್ರಾಮದ ಚಿತ್ರಪಾಡಿಯ ಕಾರ್ತಟ್ಟು ಶ್ರೀ ಅಘೋರೇಶ್ವರ ದೇವಸ್ಥಾನದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಧಾರ್ಮಿಕ ಹಾಗೂ ಸಮಾಜ ಸೇವಕ, ಬೆಂಗಳೂರಿನ ಖ್ಯಾತ  ಶೇಖರ್ ಆಸ್ಪತ್ರೆಯ ನಿರ್ದೇಶಕ ಡಾ. ಕಾರ್ತಟ್ಟು ಸುರೇಶ್ ಐತಾಳ್  ಆಯ್ಕೆಗೊಂಡರು.

ಭಾನುವಾರ  ಶ್ರೀ ದೇವಳದ ಸಭಾಂಗಣದಲ್ಲಿ ನಡೆದ ಪದಪ್ರಧಾನ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಕೆ. ಚಂದ್ರಶೇಖರ್ ಕಾರಂತರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

ಇದರ ಪೂರ್ವಭಾಗಿಯಾಗಿ ದೇವಳದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸೀಯಾಳಾಭಿಷೇಕ, ಗಣಹೋಮ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಶುಭಕೋರಿದರು.

ನೂತನ ಅಧ್ಯಕ್ಷರು  ತಮ್ಮ ಅಧಿಕಾರ ಅವಧಿಯಲ್ಲಿ ಅನೇಕ ಹೊಸ ಯೋಜನೆಗಳ ಬಗ್ಗೆ ಪ್ರಸ್ತಾವಿಸಿ ಸ್ಥಳೀಯರ ಸಹಕಾರ ಯಾಚಿಸಿದರು. ಸಭೆಯಲ್ಲಿ ದೇವಳದ ಖಜಾಂಚಿ ಪ್ರಭಾಕರ ಮಧ್ಯಸ್ಥ, ಗಾಯತ್ರಿ ಚಂದ್ರಶೇಖರ್ ಕಾರಂತ, ಸುಮಾ ಸುರೇಶ್ ಐತಾಳ್, ಸದಸ್ಯರಾದ ನಿತ್ಯಾನಂದ ನಾಯರಿ, ಪ್ರಕಾಶ್ ಮಧ್ಯಸ್ಥ, ಸುಬ್ರಾಯ ಗಾಣಿಗ, ವಸಂತಿ ನಾಯರಿ, ನಾಗರಾಜ್ ಐತಾಳ್, ವೆಂಕಟೇಶ್ ಕೆ, ರಾಘವೇಂದ್ರ ನಾಯರಿ, ಸ್ನೇಹಲತಾ ಉಪಸ್ಥಿತರಿದ್ದರು.

ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ಯಾಮ ಸುಂದರ ನಾಯರಿ ಸ್ವಾಗತಿಸಿದರು. ದೇವಳದ ಶ್ರೇಯೋಭಿವೃದ್ಧಿಗೆ ದುಡಿದ ಹಿರಿಯರಾದ ರಾಮಚಂದ್ರ ನಾಯರಿಯವರು ಪ್ರಸ್ತಾವಿಕ ಮಾತನಾಡಿ, ದೇವಳದ ಪ್ರಧಾನ ಅರ್ಚಕ ವಿಧ್ವಾನ್ ಬಾಲಕೃಷ್ಣ ನಕ್ಷತ್ರಿ ಶುಭ ಕೋರಿದರು. ಕಾರ್ಯಕ್ರಮವನ್ನು ಸದಸ್ಯ ಉಮೇಶ್ ನಾಯರಿ ಅವರು ನಿರೂಪಿಸಿ, ಶಿವಾನಂದ ಧನ್ಯವಾದ ಸಮರ್ಪಿಸಿದರು, ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಾದ ಪ್ರತೀಕ್ಷಾ ಮದ್ಯಸ್ಥ, ಪ್ರದೀಪ್ ಮಧ್ಯಸ್ಥ, ರವಿ ಬನ್ನಾಡಿ ಹಾಗೂ ಮಹೇಶ್ ನಾಯರಿ ಕಾರ್ತಟ್ಟು ಅವರಿಂದ ಭಕ್ತಿಗಾಯನ ಕಾರ್ಯಕ್ರಮ ನೆರವೇರಿತು.

Exit mobile version