Site icon Kundapra.com ಕುಂದಾಪ್ರ ಡಾಟ್ ಕಾಂ

ಹರಿಯುವ ನೀರಿಗೆ ತಡೆಯಾಗಿದ್ದ ಕಂಪೌಂಡ್ ಅಧಿಕಾರಿಗಳಿಂದ ತೆರವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ
: ಐರೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಬುಕಳದ ಸಮೀಪ ದೂಳಂಗಡಿ ಎಂಬಲ್ಲಿ ಹರಿಯುವ ನೀರಿಗೆ ತಡೆಯಾಗಿದ್ದ ಕಂಪೌಂಡ್‌ ತೆರವು ಕಾರ್ಯಚರಣೆ ನಡೆಸಲಾಯಿತು.

ದೂಳಂಗಡಿಯ ಸಾವಿತ್ರಿ ಗಾಣಿಗರ ಮನೆಗೆ ಬಾರಿ ಮಳೆಗೆ ನೀರು ನುಗ್ಗಿದ ಪರಿಣಾಮ ಮನೆ ವಠಾರ ನೀರಿನಿಂದ ಆವೃತವಾಗಿದ್ದು ಮನೆಯಾಕೆ ಈ  ಬಗ್ಗೆ ಬ್ರಹ್ಮಾವರದ ತಹಶೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ ಅವರಿಗೆ ದೂರು ನೀಡಿದ ಹಿನ್ನಲ್ಲೆಯಲ್ಲಿ   ಸ್ಥಳಕ್ಕೆ ಕೋಟ ಕಂದಾಯ ನಿರೀಕ್ಷಕ ಮಂಜು ಬಿಲ್ಲವ ಹಾಗೂ ಐರೋಡಿ ಗ್ರಾಮ ಲೆಕ್ಕಿಗ ಚಲುವರಾಜು ಬಾರಿ ಮಳೆಯ ನಡುವೆಯೂ ಪರಿಶೀಲಿಸಿದ್ದು ಸನಿಹದ ಒಂದೇರಡು ಮನೆಯವರು ಸರಾಗವಾಗಿ ಹರಿಯುವ ನೀರಿಗೆ ಕಂಪೌಂಡ್ ಕಟ್ಟಿ ತಡೆಯೊಡ್ಡಿದ್ದರು.

ಈ ದಿಸೆಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಗೊಳಿಸಿ ನೀರು ಸರಗವಾಗಿ ಹರಿದು ಹೋಗುಲು ಅನುವು ಮಾಡಿಕೊಡಲಾಯಿತು. ಈ ಬಗ್ಗೆ ಸ್ಥಳದಲ್ಲಿದ್ದ ಸುತ್ತಮುತ್ತಲಿನ ಮನೆಯವರು ನಿಟ್ಟುಸಿರು ಬೀಡುವಂತ್ತಾಗಿದೆ. ಅಧಿಕಾರಿ ದಿಢೀರ್ ಕಾರ್ಯಾಚರಣೆಗೆ ವ್ಯಾಪಕಪ್ರಶಂಸೆ ವ್ಯಕ್ತವಾಗಿದೆ.

Exit mobile version