ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಂಘನೆಯಿಂದ ಬಲವೃದ್ಧಿಸಿಕೊಳ್ಳಿ ಎನ್ನುವ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಹಾಗೂ ಸಂಘಸಂಸ್ಥೆಗಳು ಮೈಗೂಡಿಸಿಕೊಂಡರೆ ಅಭಿವೃದ್ಧಿ ತನ್ನಿಂತ್ತಾನೆ ಗೊಳ್ಳುತ್ತದೆ ಎಂದು ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಪ್ರಧಾನಕಾರ್ಯದರ್ಶಿ ರಮೇಶ್ ಕೆ. ಕೋಟ್ಯಾನ್ ಹೇಳಿದರು.
ಅವರು ಮಂಗಳವಾರ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಸಾಸ್ತಾನ ಘಟಕದ ಕಛೇರಿ ಉದ್ಘಾಟಿಸಿ ಮಾತನಾಡಿದರು. ನಾವು ಉನ್ನತಿ ಸಾಧಿಸುವುದರ ಜತೆಗೆ ಸಂಘಟನೆಗಳನ್ನು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಗೊಳಿಸಬೇಕು, ಜಿಲ್ಲಾ ಮಟ್ಟದ ಸಂಘಟನೆಯಿಂದ ಸಾಕಷ್ಟು ಹೋರಾಟಗಳು ನಡೆದಿವೆ ಯಶಸ್ಸು ಕಂಡಿದ್ದೇವೆ ರಘುಪತಿ ಭಟ್ ನೇತೃತ್ವದಲ್ಲಿ ಜಿಲ್ಲಾ ಸಂಘಟನೆ ಸದೃಢವಾಗಿ ಬೆಳೆದು ನಿಂತಿದೆ ಎಂದರು.
ಸಾಸ್ತಾನ ಘಟಕದ ಅಧ್ಯಕ್ಷ ಓಣಿಮನೆ ಜಿ. ರಾಘವೇಂದ್ರ ಪೂಜಾರಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಜಿಲ್ಲಾ ಸಂಘಟನೆಯ ಉಪಾಧ್ಯಕ್ಷರಾದ ಕೃಷ್ಣ ಕೋಟ್ಯಾನ್, ದಿನೇಶ್ ಕಿಣಿ, ಜಯಕರ ಕುಂದರ್, ಸತೀಶ್ ನಾಯಕ್, ಸಂಘಟನಾಕಾರ್ಯದರ್ಶಿ ವಿಕ್ರಮ್ ರಾವ್, ಕೋಶಾಧಿಕಾರಿ ಪ್ರಕಾಶ್ ಅಡಿಗ, ಸಾಸ್ತಾನ ಘಟಕದ ಮಾಜಿ ಅಧ್ಯಕ್ಷ ಬಾಲಕೃಷ್ಣ ಪೂಜಾರಿ,ಸಾಲಿಗ್ರಾಮ ಘಟಕದ ಅಧ್ಯಕ್ಷ ಸುರೇಂದ್ರ ಗಾಣಿಗ, ಕಟ್ಟಡದ ಮಾಲಿಕ ವಾಸುದೇವ ಕಾರಂತ, ಐರೋಡಿ ಗ್ರಾಮಪಂಚಾಯತ್ ಸದಸ್ಯರಾದ ಪ್ರತಾಪ ಶೆಟ್ಟಿ, ಸಾಸ್ತಾನ ಅನ್ಯೋನ್ಯತಾ ಗೂಡ್ಸ್ ಚಾಲಕ ಮಾಲಕ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಗೋಳಿಗರಡಿ ದೈವಸ್ಥಾನದ ಪಾತ್ರಿ ಶಂಕರ್ ಪೂಜಾರಿ, ರೋಟರಿ ಮಾಜಿ ಅಧ್ಯಕ್ಷ ಮನೋಜ್ ಕುಮಾರ್, ಭುವನೇಶ್ವರಿ ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಾಂಡೇಶ್ವರ ಗ್ರಾಮಪಂಚಾಯತ್ ಸದಸ್ಯ ಚಂದ್ರಮೋಹನ್ ಪೂಜಾರಿ ಸ್ವಾಗತಿಸಿ, ನಿರೂಪಿಸಿದರು. ಸಾಸ್ತಾನ ಘಟಕದ ಕಾರ್ಯದರ್ಶಿ ರವಿ ಪೂಜಾರಿ ವಂದಿಸಿದರು.

