ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಅಮೃತೇಶ್ವರೀ ದೇಗುಲಕ್ಕೆ ಉಡುಪಿ ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಂಡು ಅಧಿಕಾರ ಸ್ವೀಕರಿಸಿದ ಸ್ವರೂಪಾ ಟಿ.ಕೆ ಭಾನುವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಜಿಲ್ಲಾಧಿಕಾರಿ ಅವರನ್ನು ಬರಮಾಡಿಕೊಂಡು ಸ್ವಾಗತಿಸಿದರು.
ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿಕೊಂಡ ಜಿಲ್ಲಾಧಿಕಾರಿಯವರನ್ನು ದೇಗುಲದ ವತಿಯಿಂದ ಶಾಲು ಹೋದಿಸಿ ಪ್ರಸಾದ ವಿತರಿಸಿ ಗೌರವಿಸಲಾಯಿತು.
ದೇಗುಲದ ಆಡಳಿತ ಮಂಡಳಿಯ ಸದಸ್ಯರಾದ ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಚಂದ್ರ ಆಚಾರ್, ಸುಧಾ ಪೂಜಾರಿ, ಜ್ಯೋತಿ ದೇವದಾಸ್, ಮಾಜಿ ಟ್ರಸ್ಟಿ ಚಂದ್ರ ಪೂಜಾರಿ, ರಾಜು ಪೂಜಾರಿ, ಸುಬ್ರಾಯ ಜೋಗಿ, ಸ್ಥಳೀಯ ದೇವೇಂದ್ರ ಗಾಣಿಗ, ಭರತ್ ಗಾಣಿಗ, ಅರ್ಚಕರಾದ ವೀರಭದ್ರ, ರಾಘವೇಂದ್ರ ಜೋಗಿ, ವಿಜಯ ಜೋಗಿ, ದೇಗುದ ವ್ಯವಸ್ಥಾಪಕ ಗಣೇಶ್ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.

