ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪಾಂಡೇಶ್ವರ ಗ್ರಾಮಪಂಚಾಯತ್ ವ್ಯಾಪ್ತಿಯ ಮೂಡಹಡು ಹಿಂದೂ ರುದ್ರ ಭೂಮಿಯ ಮೇಲ್ಛಾವಣಿ ಶಿಥಿಲಗೊಂಡಿರುವುದನ್ನ ಮನಗಂಡ ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಸುಮಾರು 70,000 ವೆಚ್ಚದಲ್ಲಿ ಮೇಲ್ಚಾವಣಿಯೊಂದಿಗೆ ನವೀಕರಣಗೊಳಿಸಿ ಹಿಂದೂ ರುದ್ರ ಭೂಮಿ ಟ್ರಸ್ಟಿಗೆ ಇತ್ತೀಚಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಹಿಂದೂ ರುದ್ರ ಭೂಮಿಯ ಟ್ರಸ್ಟಿನ ಅಧ್ಯಕ್ಷ ನಾರಾಯಣ ಆಚಾರ್, ಸದಸ್ಯರಾದ ಪ್ರತಾಪ್ ಶೆಟ್ಟಿ, ಶಂಕರ್ ಕುಲಾಲ್ ಹಾಗೂ ಪಾಂಡೇಶ್ವರ ಪಂಚಾಯತಿನ ಅಧ್ಯಕ್ಷ ಸುಶೀಲ ಪೂಜಾರಿ, ಉಪಾಧ್ಯಕ್ಷ ವೈ.ಬಿ ರಾಘವೇಂದ್ರ, ಚಂದ್ರಮೋಹನ್ ಪೂಜಾರಿ, ರವೀಶ್ ಶ್ರೀಯಾನ್, ಸುಜಾತ ವೆಂಕಟೇಶ್, ರೋಟರಿ ಕ್ಲಬ್‌ನ ಅಧ್ಯಕ್ಷ ಲೀಲಾವತಿ ಗಂಗಾಧರ ಹಾಗೂ ಕಾರ್ಯದರ್ಶಿ ಸುಲತ ಹೆಗ್ಡೆ, ಉಪಾಧ್ಯಕ್ಷ ರತ್ನ ಜೆ ರಾಜ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಟ್ರಸ್ಟ್ ಹಾಗೂ ಸ್ಥಳೀಯಾಡಳಿತ ರೋಟರಿ ಕ್ಲಬ್‌ಗೆ ಕೃತಜ್ಞತೆ ಸಲ್ಲಿಸಿತು. ರೋಟರಿ ಕ್ಲಬ್ ಹಂಗಾರಕಟ್ಟೆ-ಸಾಸ್ತಾನ ವತಿಯಿಂದ ಪಾಂಡೇಶ್ವರ ಮೂಡಹಡು ಹಿಂದೂ ರುದ್ರ ಭೂಮಿಯ ನವೀಕರಿಸಿ ಇತ್ತೀಚಿಗೆ ಹಸ್ತಾಂತರಿಸಿತು.

