Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ರತ್ತುಬಾಯಿ ಜನತಾ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ರತ್ತು ಬಾಯಿ ಜನತಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವನ್ನು ವಿತರಿಸಲಾಯಿತು.

ಸಮವಸ್ತ್ರದ ದಾನಿಗಳಾದ ರಾಮ್ ದಾಸ್ ಗುಡೆ ಮನೆ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ರಾಜು ಎಸ್. ಪೂಜಾರಿ, ಮುಖ್ಯ ಅದ್ಯಾಪಕರಾದ ಆನಂದ್ ಮದ್ದೋಡಿ, ಪೋಷಕ ಪ್ರತಿನಿಧಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ಧರು.

ಪ್ರಕಾಶ್ ಮಾಕೋಡಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯಾದ ಚೈತ್ರಾ ಯಡ್ತರೆ ಸ್ವಾಗತಿಸಿ, ಗುರುರಾಜ್ ಎಸ್. ವಂದಿಸಿದರು.

Exit mobile version