ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ರತ್ತು ಬಾಯಿ ಜನತಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವನ್ನು ವಿತರಿಸಲಾಯಿತು.
ಸಮವಸ್ತ್ರದ ದಾನಿಗಳಾದ ರಾಮ್ ದಾಸ್ ಗುಡೆ ಮನೆ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ರಾಜು ಎಸ್. ಪೂಜಾರಿ, ಮುಖ್ಯ ಅದ್ಯಾಪಕರಾದ ಆನಂದ್ ಮದ್ದೋಡಿ, ಪೋಷಕ ಪ್ರತಿನಿಧಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ಧರು.
ಪ್ರಕಾಶ್ ಮಾಕೋಡಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯಾದ ಚೈತ್ರಾ ಯಡ್ತರೆ ಸ್ವಾಗತಿಸಿ, ಗುರುರಾಜ್ ಎಸ್. ವಂದಿಸಿದರು.










