Site icon Kundapra.com ಕುಂದಾಪ್ರ ಡಾಟ್ ಕಾಂ

ಹೊಸಬೆಂಗ್ರೆ ಅಂಗನವಾಡಿ ಆರೋಗ್ಯ ತಪಾಸಣೆ, ಪರಿಕರ ಹಸ್ತಾಂತರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಹೊಸಬೆಂಗ್ರೆ ಅಂಗನವಾಡಿ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ಪೋಷಣ್ ಅಭಿಯಾನದಡಿ ಆರೋಗ್ಯ ತಪಾಸಣೆ ಕಾರ್ಯಕ್ರಮ ಜರಗಿತು.

ಇದೇ ವೇಳೆ ಅಂಗನವಾಡಿ ಪುಟಾಣಿಗಳಿಗೆ ಶಿಶುಅಭಿವೃದ್ಧಿ ಯೋಜನೆ ಬ್ರಹ್ಮಾವರ ಇಲಾಖೆಯಿಂದ ನೀಡಿರುವ ಪುಸ್ತಕ, ಕ್ರೇಯನ್ಸ್, ಸ್ತ್ರಿಶಕ್ತಿ ಸಂಘದವರು ನೀಡಿರುವ ಬ್ಯಾಗ್, ಸ್ಥಳೀಯರು ದೀಪಾ ಆರ್. ಖಾರ್ವಿ ಹಾಗೂ ವಸಂತಿ ಅಂಗನವಾಡಿ ಕೇಂದ್ರಕ್ಕೆ ಶಾಲಾಪೂರ್ವ ಶಿಕ್ಷಣಕ್ಕೆ ಬೇಕಾಗುವ ಸಾಮಗ್ರಿ, ಗಡಿಯಾರವನ್ನು ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾಖಾರ್ವಿ ಅಧ್ಯಕ್ಷತೆಯಲ್ಲಿ ಹಸ್ತಾಂತರಿಸಿಕೊಂಡಿತು.

ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿ ಪಿ., ಹಾಗೂ ಸತೀಶ್ ಜಿ. ಕುಂದರ್, ಬಾಲಾವಿಕಾಸ ಸಮಿತಿಯ ಅಧ್ಯಕ್ಷೆ ಸುಲೋಚನಾ, ಸದಸ್ಯರಾದ ನಿರ್ಮಲ, ಆಶಾ ಕಾರ್ಯಕರ್ತೆ ಜ್ಯೋತಿ, ಆರೋಗ್ಯ ಕೇಂದ್ರದ ಪರಸಪ್ಪ, ಸಂಜೀವಿನಿ ಅಧ್ಯಕ್ಷೆ ಪೂರ್ಣಿಮ, ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್ ಕುಂದರ್,ಸ್ತ್ರೀ ಶಕ್ತಿ ಸಂಘದವರು, ತಾಯಂದಿರು, ಪೋಷಕರು ಉಪಸ್ಥಿತರಿದ್ದರು. ಇದೇ ವೇಳೆ ಆರೋಗ್ಯ ತಪಾಸಣೆಯಲ್ಲಿ ಮಹಿಳೆಯರ ಬಿ.ಪಿ ಶುಗರ್ ತಪಾಸಣೆ ಮಾಡಲಾಯಿತು.

Exit mobile version