ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸವಿತಾ ಸಮಾಜದ ಸಾಮಾಜಿಕ ಕಾರ್ಯಗಳು ಜನಸಾಮಾನ್ಯರನ್ನು ಅತಿ ಹತ್ತಿರದಲ್ಲಿ ತಲುಪುತ್ತಿದೆ. ಇದೀಗ ಸಮಾಜ ಅನಾಥಾಶ್ರಮಗಳ ನೆರವಿಗೆ ಧಾವಿಸಿರುವುದು ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಎಂದು ಉಡುಪಿ ಜಿಲ್ಲಾ ಸವಿತಾ ಸಮಾಜ ರಾಜ್ಯ ಪ್ರತಿನಿಧಿ ಗೋವಿಂದ ಭಂಡಾರಿ ಬನ್ನಂಜೆ ಹೇಳಿದರು.
ಅವರು ಮಂಗಳವಾರ ಕೋಟ ವಲಯ ಸವಿತಾ ಸಮಾಜ ಕೋಟ ಇವರ ಸಾರಥ್ಯದಲ್ಲಿ ಹೊಸಬದುಕು ಆಶ್ರಮ ತೋಡ್ಕಟ್ಟು-ಸಾಲಿಗ್ರಾಮ ಇಲ್ಲಿನ ಆಶ್ರಮ ನಿವಾಸಿಗಳ ಸವಿತಾ ಸೇವಾ ಸಿಂಚನ -2025 ಸಂಘಟನೆಯ ಜೊತೆಗೆ ಬಾಂಧವ್ಯದ ಸಿಂಚನ ಎನ್ನುವ ಶೀರ್ಷಿಕೆಯಡಿ ನಡೆದ ಕ್ಷೌರ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಮ್ಮ ವೃತ್ತಿ ಕಾಯಕದ ಮೂಲಕ ಸಮಾಜ ಸೇವೆಯನ್ನು ಮೈಗೂಡಿಸಿಕೊಂಡ ಕೋಟ ವಲಯ ಸವಿತ ಸಮಾಜದ ಕಾರ್ಯ ಅತ್ಯಂತ ಪ್ರಶಂಸನೀಯವಾದದ್ದು. ಇಂಥಹ ಒಗ್ಗಟ್ಟು ನಮ್ಮ ಸಮಾಜದ ಉನ್ನತ್ತಿಗೆ ಪ್ರೇರಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ರಾಜು ಸಿ. ಭಂಡಾರಿ ಕಿನ್ನಿಮೂಲ್ಕಿ ಆಶ್ರಮದ ನಿವಾಸಿಗಳಿಗೆ ಕ್ಷೌರಿಕ ಕಾರ್ಯದ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ಕೋಟ ವಲಯ ಸವಿತಾ ಸಮಾಜ ಗೌರವಾಧ್ಯಕ್ಷ ರಮೇಶ ಭಂಡಾರಿ ಕಾರ್ಕಡ ವಹಿಸಿದ್ದರು. ಇದೇ ವೇಳೆ ಪರಿಸರಸ್ನೇಹಿ ಗಿಡ ವಿತರಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು.
ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ತಾಲೂಕು ಸವಿತಾ ಸಮಾಜ ಅಧ್ಯಕ್ಷ ಶಿವರಾಮ ಭಂಡಾರಿ ಹಂದಾಡಿ, ಉಡುಪಿ ಜಿಲ್ಲಾ ಸವಿತಾ ಸಮಾಜ ಪ್ರಧಾನ ಕಾರ್ಯದರ್ಶಿ ಪಡುಕರೆ ಮಂಜುನಾಥ ಭಂಡಾರಿ, ಕೋಟ ವಲಯ ಮಹಿಳಾ ಸವಿತಾ ಸಮಾಜ ನಯನ ಅಧ್ಯಕ್ಷ ಪ್ರಶಾಂತ ಭಂಡಾರಿ, ಹೊಸಬದುಕು ಆಶ್ರಮ ತೋಡ್ಕಟ್ಟು-ಸಾಲಿಗ್ರಾಮ ಪ್ರವರ್ತಕ ವಿನಯ್ ಚಂದ್ರ ಸಾಸ್ತಾನ, ಕೋಟ ವಲಯ ಸವಿತಾ ಸಮಾಜ ಕಾರ್ಯದರ್ಶಿ ಪ್ರಶಾಂತ ಭಂಡಾರಿ ಶೇಡಿಮನೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ತಾರಾ ಮಂಜುನಾಥ್ ಭಂಡಾರಿ ನಿರೂಪಿಸಿ, ಸವಿತಾ ಸಮಾಜದ ಮಹಿಳಾ ಸಮಿತಿಯ ಕಾರ್ಯದರ್ಶಿ ಸುಮನ ಪ್ರಶಾಂತ್ ಸ್ವಾಗತಿಸಿ, ಕೋಟ ವಲಯದ ಉಪಾಧ್ಯಕ್ಷ ಗಣೇಶ್ ಬಂಗೇರ ವಂದಿಸಿದರು.

