Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಸಮುದಾಯ ಬಾನುಲಿ ರೇಡಿಯೋದಲ್ಲಿ ಗಂಟಿಹೊಳೆ ಅವರೊಂದಿಗೆ ಫೋನ್ ಇನ್ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ & ಸೈನ್ಸ್ ಕಾಲೇಜ್ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪುರ 89.6 ಎಫ್ಎಂ ನಲ್ಲಿ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರೊಂದಿಗೆ ನಡೆಸಿದ ಫೋನ್ ಇನ್ ಕಾರ್ಯಕ್ರಮ “ನಿಮ್ಮ ಪ್ರಶ್ನೆಗಳಿಗೆ ನಮ್ಮ ಧ್ವನಿ”  ಈ ಕಾರ್ಯಕ್ರಮದಲ್ಲಿ ರಸ್ತೆ ದುರಸ್ತಿ,ಕಾಲುಸಂಕ, ಸಮರ್ಪಕ ಸಾರಿಗೆ ಸಂಪರ್ಕ, ಶಿಕ್ಷಣ ಇತ್ಯಾದಿ ಪ್ರಶ್ನೆಗಳಿಗೆ ಶಾಸಕರು ಉತ್ತರಿಸಿದ್ದಾರೆ.

ಈ ರೇಡಿಯೋ ಕಾರ್ಯಕ್ರಮದ ಮುದ್ರಿತ  ಪ್ರಸಾರ ಜುಲೈ 10ರ ಗುರುವಾರ ಸಂಜೆ 5:00 ಗಂಟೆಗೆ ಬಿತ್ತರಗೊಳ್ಳಲಿದೆ.

ಈ ಕಾರ್ಯಕ್ರಮವನ್ನು ರೇಡಿಯೋ ಕುಂದಾಪುರ  ಆಪ್ (Radio Kundapura) ಮತ್ತು ರೇಡಿಯೋ ಗಾರ್ಡನ್ (Radio Garden) ಮೂಲಕ ಕೇಳಬಹುದು.

Exit mobile version