ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ & ಸೈನ್ಸ್ ಕಾಲೇಜ್ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪುರ 89.6 ಎಫ್ಎಂ ನಲ್ಲಿ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರೊಂದಿಗೆ ನಡೆಸಿದ ಫೋನ್ ಇನ್ ಕಾರ್ಯಕ್ರಮ “ನಿಮ್ಮ ಪ್ರಶ್ನೆಗಳಿಗೆ ನಮ್ಮ ಧ್ವನಿ” ಈ ಕಾರ್ಯಕ್ರಮದಲ್ಲಿ ರಸ್ತೆ ದುರಸ್ತಿ,ಕಾಲುಸಂಕ, ಸಮರ್ಪಕ ಸಾರಿಗೆ ಸಂಪರ್ಕ, ಶಿಕ್ಷಣ ಇತ್ಯಾದಿ ಪ್ರಶ್ನೆಗಳಿಗೆ ಶಾಸಕರು ಉತ್ತರಿಸಿದ್ದಾರೆ.
ಈ ರೇಡಿಯೋ ಕಾರ್ಯಕ್ರಮದ ಮುದ್ರಿತ ಪ್ರಸಾರ ಜುಲೈ 10ರ ಗುರುವಾರ ಸಂಜೆ 5:00 ಗಂಟೆಗೆ ಬಿತ್ತರಗೊಳ್ಳಲಿದೆ.
ಈ ಕಾರ್ಯಕ್ರಮವನ್ನು ರೇಡಿಯೋ ಕುಂದಾಪುರ ಆಪ್ (Radio Kundapura) ಮತ್ತು ರೇಡಿಯೋ ಗಾರ್ಡನ್ (Radio Garden) ಮೂಲಕ ಕೇಳಬಹುದು.










