Site icon Kundapra.com ಕುಂದಾಪ್ರ ಡಾಟ್ ಕಾಂ

ಗುರು ಪೂರ್ಣಿಮೆಗೆ ಸಂಸದ ಕೋಟರಿಂದ ಗುರುವಂದನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಸಮಾಜದಲ್ಲಿ ನಮ್ಮಗೆ ಗುರು ದಕ್ಷಿಣೆ ನೀಡಿದ ಬಾಲ್ಯದ ಗುರುಗಳ ನೆನಪು ಅಜರಾಮರ ಆದರೆ ಅವರಿಗೆ ಗುರುವಂದನೆ ಸಲ್ಲಿಸಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಗುರು ಪೂರ್ಣಿಮೆಯ ಅಂಗವಾಗಿ ತಾನು ಕಲಿತ ಶಾಂಭವೀ ಶಾಲೆಗ ಗುರುಗಳಾದ ಕೋಟ ಮಾಹಾಲಿಂಗ ದೇವಾಡಿಗ ಅವರಿಗೆ ಗುರುವಂದನೆ ಸಲ್ಲಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೋಟ ಗ್ರಾಮ ಪಂಚಾಯತ್ ಸದಸ್ಯರಾದ ಅಜಿತ್ ದೇವಾಡಿಗ, ಚಂದ್ರ ಪೂಜಾರಿ ಕದ್ರಿಕಟ್ಟು, ಸಂತೋಷ್ ಪ್ರಭು, ವನೀತಾ ಆಚಾರ್, ಮಾಜಿ ಪಂಚಾಯತ್ ಸದಸ್ಯ ಗೋಪಾಲ್ ಪೈ, ಮಾಜಿ ತಾ.ಪಂ ಸದಸ್ಯೆ ಲಲಿತಾ ಪೂಜಾರಿ, ಬಿಜೆಪಿ ಬೂತ್ ಅಧ್ಯಕ್ಷ ನಾಗರಾಜ ಮೈಯ್ಯ, ಗೋಪಾಲ್ ಮಡಿವಾಳ, ನಿವೃತ್ತ ಶಿಕ್ಷಕ ಮಹಾಲಿಂಗ ದೇವಾಡಿಗರ ಕುಟುಂಬಿಕರು ಉಪಸ್ಥಿತರಿದ್ದರು.

Exit mobile version