Site icon Kundapra.com ಕುಂದಾಪ್ರ ಡಾಟ್ ಕಾಂ

ಐರೋಡಿ ಗ್ರಾಮ ಪಂಚಾಯತ್ ಎದುರು ಬಿಜೆಪಿ ವಿರುದ್ಧ ಕೋಟ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಐರೋಡಿ ಗ್ರಾಮ  ಪಂಚಾಯತ್ ಎದುರು 9/ 11 ಸಮಸ್ಯೆ , ಅಕ್ರಮ ಸಕ್ರಮ 53 ಮತ್ತು 57 ಅರ್ಜಿ ತಿರಸ್ಕಾರ , ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ರದ್ದತಿ ಮತ್ತು ವಿದ್ಯುತ್ ದರ ಏರಿಕೆ ಕುರಿತು ಬಿಜೆಪಿ ಮಾಡುತ್ತಿರುವ ಅಪಪ್ರಚಾರಕ್ಕೆ ಕಾಂಗ್ರೆಸ್ ಪಕ್ಷದಿಂದ ಜನತೆಗೆ ವಾಸ್ತವ ವಿಚಾರ ತಿಳಿಸುವ ಮತ್ತು ಬಿಜೆಪಿ ಸುಳ್ಳು ಪ್ರತಿಭಟನೆ ವಿರುದ್ಧ ಕಾಂಗ್ರೆಸ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಎ. ಕುಂದರ್ ಅವರು ಪ್ರಸ್ತಾವಿಕವಾಗಿ ಮಾತನಾ̧ಡಿ ಬಿಜೆಪಿಯವರು ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳು ರದ್ದದಾದರೆ ಮುಂದೆ ನಾವು ಅಧಿಕಾರಕ್ಕೆ ಇರಬಹುದೆಂದು ಹಂಬಲಿಸುತ್ತಿದ್ದಾರೆ ಇವರ ಸುಳ್ಳುಗಳು ಇನ್ನೂ ಹೆಚ್ಚು ದಿನ ನಡೆಯಲ್ಲ ಎಂದು ಬಿಜೆಇ ಸುಳ್ಳಿನ ಪ್ರತಿಭಟನೆಯನ್ನು ಖಂಡಿಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ನಾಗೇಶ್ ಉದ್ಯಾವರ ಬಿಜೆಪಿ ಕೊಳಕು ರಾಜಕಾರಣದ ವಿರುದ್ಧ ಆಕ್ರೋಶ ಹೊರಹಾಕಿದರು.

ಐರೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಶಿವರಾಮ ಶ್ರೀಯನ್, ಸುಧಾಕರ್ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ರೇಖಾ ಪಿ. ಸುವರ್ಣ, ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ ಅಣಲಾಡಿ ಮಠ ಇದರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲ ಮಡಿವಾಳ, ಸದಸ್ಯರಾದ ಕಮಲಾ ಗಣೇಶ್, ವಿಜಯ್ ಪೂಜಾರಿ, ಪ್ರಮುಖರಾದ ಮಂಜುನಾಥ ಪೂಜಾರಿ, ಪದ್ಮಗೋಪಾಲ, ವಾಸು ಕೋಟ್ಯಾನ್, ಮಧುಕರ್ ಪೂಜಾರಿ, ಕುಸುಮ, ಬೇಡು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

ಐರೋಡಿ ಗ್ರಾಮೀಣ ಸಮಿತಿ ಅಧ್ಯಕ್ಷರಾದ ಮೋಸಸ್ ರೋಡ್ರಿಗಸ್ ಸ್ವಾಗತಿ̧ಸಿ ಧನ್ಯವಾದ ಸಮರ್ಪಿಸಿದರು

Exit mobile version