Site icon Kundapra.com ಕುಂದಾಪ್ರ ಡಾಟ್ ಕಾಂ

ಸಂಘಟಿತ ಹೋರಾಟದಿಂದ ಯಶಸ್ಸು ಸಾಧ್ಯ: ಆನಂದ್ ಸಿ. ಕುಂದರ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಸಂಘಗಳ ಶ್ರೇಯಸ್ಸಿಗೆ ಒಗ್ಗಟ್ಟು ಅಗತ್ಯ. ಈ ನಿಟ್ಟಿನಲ್ಲಿ ಸಂಘಟಿತ ಹೋರಾಟದ ಮೂಲಕ ಯಶಸ್ಸು ಸಾಧ್ಯ ಎಂದು ಕೋಟ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ಅಭಿಪ್ರಾಯಪಟ್ಟರು.

ಅವರು ಭಾನುವಾರ ಕೋಟ ಸಿ.ಎ. ಬ್ಯಾಂಕ್‌ನ ಬಿ.ಸಿ.ಹೊಳ್ಳ ಸಭಾಭವನ ಇಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಮಂಗಳೂರು ಇದರ ಕೋಟ ಮತ್ತು ಸಾಲಿಗ್ರಾಮ ವಲಯ ಸಮಿತಿ ಸಾದರಪಡಿಸುವ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮನುಕುಲದ ಸೌಂದರ್ಯ ಹೆಚ್ಚಿಸಲು ಟೈಲರ್ಸಗಳ ಪಾತ್ರ ಬಹುಮುಖ್ಯವಾದದ್ದು. ಅಂತಹ ಟೈಲರ್ಸ್‌ಗಳ ಬೇಡಿಕೆಗಳನ್ನು ಸರಕಾರದ ಜನಪ್ರತಿನಿಧಿಗಳು ಆಲಿಸಬೇಕಾಗಿದೆ, ವೃತ್ತಿ ಕಾಯಕದ ನಡುವೆ ಗೌರವಿಸುವ ಗುರುತಿಸುವ, ಸಹಾಯಹಸ್ತ ಚಾಚುವ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

ಸಭೆಯ ಅಧ್ಯಕ್ಷತೆಯನ್ನು ಕೆ.ಎಸ್.ಟಿ.ಎ ಕೋಟ ಮತ್ತು ಸಾಲಿಗ್ರಾಮ ವಲಯ ಸಮಿತಿ ಅಧ್ಯಕ್ಷ ಕೃಷ್ಣ ದೇವಾಡಿಗ ವಹಿಸಿದ್ದರು. ಟೈಲರ್ ವೃತ್ತಿ ಕಾಯಕದ ಕುಟುಂಬದ  ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ನೀಡಲಾಯಿತು

ಮುಖ್ಯ ಅಭ್ಯಾಗತರಾಗಿ ತೆಕ್ಕಟ್ಟೆ ಉದ್ಯಮಿ ಅನಂತ ನಾಯಕ್, ಕೆ.ಎಸ್.ಟಿ.ಎ ಮಂಗಳೂರು ರಾಜ್ಯ ಸಮಿತಿಯ ಕೋಶಾಧಿಕಾರಿ ಕೆ. ರಾಮಚಂದ್ರ, ಉಡುಪಿ ಜಿಲ್ಲಾ ಕೆ.ಎಸ್.ಟಿ.ಎ. ಸಮಿತಿ ಅಧ್ಯಕ್ಷ ಗುರುರಾಜ್ ಎಂ. ಶೆಟ್ಟಿ, ಉಪಾಧ್ಯಕ್ಷೆ ಗೌರಿ ವಿ. ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್, ಉದ್ಯಮಿ  ಮಾಧವ ಪೈ ಸಾಲಿಗ್ರಾಮ, ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಜತ್ತನ್,ಕೋಟ ಸಾಲಿಗ್ರಾಮ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ  ಸತೀಶ ಪೂಜಾರಿ,ಕೋಶಾಧಿಕಾರಿ  ರಮೇಶ ಪೂಜಾರಿ ಉಪಸ್ಥಿತರಿದ್ದರು.

ಬ್ರಹ್ಮಾವರ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅವಿನಾಶ್ ಮರಕಾಲ ಸ್ವಾಗತಿಸಿದರು. ಕೆ.ಎಸ್.ಟಿ.ಎ.ಬ್ರಹ್ಮಾವರ ಕ್ಷೇತ್ರ ಸಮಿತಿ ಅಧ್ಯಕ್ಷ ಗಣೇಶ್ ಪೂಜಾರಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಸಂತೋಷ್ ಕುಮಾರ್ ಕೋಟ ನಿರೂಪಿಸಿ, ವಂದಿಸಿದರು.

Exit mobile version