Site icon Kundapra.com ಕುಂದಾಪ್ರ ಡಾಟ್ ಕಾಂ

ಪಂಪರೆಯ ಕಲೆಯಾದ ಯಕ್ಷಗಾನವು ಕರಾವಳಿಯ ಹೆಮ್ಮೆ: ಆನಂದ ಸಿ. ಕುಂದರ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಮಣೂರು ಪಡುಕರೆಯ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ) ವಿಭಾಗದಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಕಾ ತರಬೇತಿ ಶಿಬಿರವು ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಗೀತಾನಂದ ಟ್ರಸ್ಟ್‌ನ ಪ್ರವರ್ತಕ ಆನಂದ ಸಿ. ಕುಂದರ್ ಉದ್ಘಾಟಿಸಿ ಮಾತಾನಾಡಿ, ಉಡುಪಿ ಜಿಲ್ಲೆಯ 90 ಶಾಲೆಗಳಲ್ಲಿ ಯಕ್ಷ ಶಿಕ್ಷಣ ತರಬೇತಿ ನಡೆಯುತ್ತಿದ್ದು, ಪಾರಂಪರಿಕ ಕಲೆಯಾದ  ಯಕ್ಷಗಾನವು ಹೊಸ ತಲೆಮಾರಿಗೆ ಪರಿಚಯವಾಗಿ ಕಲಾವಿದ ಅಥವಾ ಪ್ರೇಕ್ಷಕನಾಗಿಸುವ ಕಾರ್ಯವು ಆಗಬೇಕಿದೆ. ಇಂತಹ ತರಬೇತಿ ಶಿಬಿರದ ಮೂಲಕ ಯಕ್ಷಕಲೆಯ ವ್ಯಾಪ್ತಿಯನ್ನು ವಿಸ್ತರಿಸಬೇಕಿದೆ. ಶಿಸ್ತುಬದ್ಧ ಜೀವನ ಹಾಗೂ ನಮ್ಮ ಸಂಸ್ಕೃತಿಗಳ ಅನುಕೂಲವಾಗುವ ಯಕ್ಷಕಲೆ ಬೆಳೆಸಬೇಕಿರುವುದು ನಮ್ಮ ನಿಮ್ಮಲ್ಲರ ಹೊಣೆ ಎಂದರು.

ಸಮಾರಂಭದ ಕುರಿತು ಪ್ರಾಸ್ತಾವಿಕವಾಗಿ ಶಿಕ್ಷಕ ರಾಘವೇಂದ್ರ ಗಿಳಿಯಾರು ಯಕ್ಷಗುರುಗಳು ವಾಕ್ ಶುದ್ಧಿ ಸಭಾ ಕಂಪನ ಹೋಗಲಾಡಿಸ ಬಹುದಾದ ಯಕ್ಷಕಲೆಯನ್ನು ಶಾಸ್ತ್ರಿಯವಾಗಿ ಕಲಿತು ಮುಂದೆ ಶಿಕ್ಷಣ ಮತ್ತು ಉದ್ಯೋಗ ಹಾಗೂ ಸಮಾದಲ್ಲಿ ಉತ್ತಮ ಸ್ಥಾನಮಾನ ಕೊಡಬಲ್ಲ ಕಲೆಯಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪ್ರೌಢ ಶಾಲಾ ವಿಭಾಗದ ಅಧ್ಯಕ್ಷ ರಾಘವೇಂದ್ರ ಕಾಂಚನ್ ವಹಿಸಿದ್ದರು.

ಶಿಕ್ಷಕ ಹೆರಿಯ ನಿರೂಪಿಸಿ, ಹಿರಿಯ ಶಿಕ್ಷಕಕಾದ ರಾಮ್‌ದಾಸ್ ನಾಯಕ್ ಸ್ವಾಗತಿಸಿ, ಯಕ್ಷಗಾನ ಕೋಆರ್ಡಿನೇಟರ್ ಶಿಕ್ಷಕ ರಾಜೀವ್ ವಂದಿಸಿದರು. ತದನಂತರ ಹರ್ಷಿತಾ ಅಮಿನ್ ಸಂಕೇತ್ ವಿದ್ಯಾರ್ಥಿಗಳ ಹಿಮ್ಮೆಳದೊಂದಿಗೆ ಯಕ್ಷಗಾನ ಪ್ರಾತ್ಯಕ್ಷತೆ ಜರುಗಿತು.

Exit mobile version