Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಟ: ಜೂಜಾಟದಲ್ಲಿ ತೊಡಗಿದ್ದ 6 ಮಂದಿಯ ಬಂಧನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಬ್ರಹ್ಮಾವರ ತಾಲೂಕಿನ ಅಚ್ಲಾಡಿ ಗ್ರಾಮದ ಗರಿಕೆಮಠ ಎಂಬ ಹಾಡಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಟ ಆಡುತ್ತಿದ್ದ ಜನರನ್ನು ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸುಧಾಪ್ರಭು ಅವರು ಬಂಧಿಸಿದ್ದಾರೆ.

ಆರೋಪಿಗಳಾದ  ರಾಜು, ರಮಾನಂದ, ರಾಜು , ಸಂತೋಷ್, ರಾಜೀವ್ ಹಾಗೂ ಕೃಷ್ಣ ಎಂಬುವರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಅಂದರ್ – ಬಾಹರ್ ಜುಗಾರಿ ಆಟಕ್ಕೆ ಬಳಸಿದ ನಗದು ಹಣ 15,450 ರೂಪಾಯಿ, ಕಾರು-3, ಸ್ಕೂಟರ್‌ -2, ರೌಂಡ್‌ ಟೇಬಲ್‌ -1,ಪ್ಲಾಸ್ಟೀಕ್‌ ಚೇರಗಳು-6, ಇಸ್ಪೀಟ್‌ ಎಲೆಗಳನ್ನು ಸ್ವಾಧಿನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version