ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮಾಜಿ ಸೈನಿಕರ ಸಂಘ ಉಡುಪಿ ಜಿಲ್ಲೆ ಇವರ ವತಿಯಿಂದ ಉಡುಪಿ ಹಾಗೂ ಚಿಕ್ಕಮಂಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭಾನುವಾರ ಅವರ ನಿವಾಸದಲ್ಲಿ ಭೇಟಿ ಮಾಡಿದರು.
ಇಸಿಎಚೆಸ್ ಮಾಜಿ ಸೈನಿಕರು ಹಾಗೂ ವೀರನಾರಿಯರ ಚಿಕಿತ್ಸಾ ಸೌಲಭ್ಯಕ್ಕಾಗಿ ಉಡುಪಿಯಲ್ಲಿ ಯಾವುದೇ ಆಸ್ಪತ್ರೆಗಳಿಲ್ಲದಿರುವುದನ್ನು ಸಂಸದರ ಗಮನಕ್ಕೆ ತರಲಾಯಿತು. ಆದಷ್ಟು ಬೇಗ ಎಂಪನಾಲ್ಡ್ ಹಾಸ್ಪಿಟಲ್‌ಗಳು ಉಡುಪಿಯಲ್ಲಿ ಲಭ್ಯ ಮಾಡಿಕೊಡಬೇಕಾಗಿ ಅವರಲ್ಲಿ ಬೇಡಿಕೆ ಸಲ್ಲಿಸಿ, ಉಡುಪಿಯಲ್ಲಿ ಮಾಜಿ ಸೈನಿಕರ ಪುನರ್ವಸತಿ ಇಲಾಖೆಯನ್ನು ಸ್ಥಾಪಿಸುವುದು ಸೇರಿದಂತೆ ಮಾಜಿ ಸೈನಿಕರಿಗೆ ಜಮೀನು ನೀಡುವುದರ ಬಗ್ಗೆ ಕೂಡ ಮನವಿಯನ್ನು ಕೊಡಲಾಯಿತು. ಇದೇ ವೇಳೆ ಸಂಸದರು ಮಾಜಿ ಸೈನಿಕರ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಿ ಕೊಡುವುದಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೇಶವ ಮಲ್ಪೆ, ಉಪಾಧ್ಯಕ್ಷರಾದ ಚಂದ್ರ ಅಮೀನ್, ಖಜಾಂಚಿ ಸುರೇಶ್ ಸಿ. ರಾವ್, ಕಾರ್ಯದರ್ಶಿ ಅಶೋಕ, ಸಂಘಟನೆಯ ಅಡ್ವೈಸರ್ ಶಿವಕುಮಾರ್ ನಾಯಿರಿ ಹಾಗೂ ಸಂಘಟನೆಯ ನಿರ್ದೇಶಕರುಗಳು, ಪದಾಧಿಕಾರಿಗಳು ಹಾಗೂ ಸುಮಾರು 40 ಜನ ಸದಸ್ಯರು ಉಪಸ್ಥಿತರಿದ್ದರು.

