Kundapra.com ಕುಂದಾಪ್ರ ಡಾಟ್ ಕಾಂ

ಪರೋಪಕಾರಿಯಾಗದವರ ಜೀವನ ವ್ಯರ್ಥ: ಡಾ. ಹೆಚ್. ಎಸ್. ಬಲ್ಲಾಳ್

ಭಂಡಾರ್ಕಾರ್ಸ್ ಕಾಲೇಜಿನ ಸಂಸ್ಥಾಪಕರ ಸಂಸ್ಮರಣೆ ಮತ್ತು ನವೀಕೃತ ಆರ.ಎನ್.ಶೆಟ್ಟಿ ಸಭಾಂಗಣವನ್ನು ಉದ್ಘಾಟನೆ

ಕುಂದಾಪುರ: ಶಿಕ್ಷಣವೆನ್ನುವುದು ಬದುಕಿಗೆ ದಾರೀಪವಾಗುವುದಲ್ಲದೇ ಸಮೃದ್ಧ ಬದುಕನ್ನು ಕಟ್ಟಿಕೊಡುತ್ತದೆ. ಅಂತಹ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟವರನ್ನು ಸ್ಮರಿಸುವುದು ಅತ್ಯಗತ್ಯ ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಹೆಚ್. ಎಸ್. ಬಲ್ಲಾಳ್ ಹೇಳಿದರು

ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಸಂಸ್ಥಾಪಕರ ಸಂಸ್ಮರಣೆ ಮತ್ತು ನವೀಕೃತ ಆರ.ಎನ್.ಶೆಟ್ಟಿ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿನಾಡಿದ ಅವರು ಜನನ ಮರಣಗಳ ನಡುವಿನ ಕಿರು ಅವಧಿಯ ಬದುಕಿನಲ್ಲಿ ಪರೋಪಕಾರಿಯಾಗದಿದ್ದರೇ ಬದುಕಿದ್ದೂ ಇಲ್ಲದಂತಾಗುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯಅತಿಥಿಗಲಾಗಿ ಆಗಮಿಸಿದ್ದ ಯುವಜನ ಮತ್ತು ಮೀನುಗಾರಿಕೆ ಸಚಿವ ಅಭಯಚಮದ್ರ ಜೈನ್ ಮಾತನಾಡಿ ಶಿಕ್ಷಣವೆನ್ನುವುದು ಮರೀಚಿಕೆಯಾಗಿದ್ದ ಕಾಲದಲ್ಲಿ ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸಿ ಜನರ ವಿದ್ಯಾವಂತರಾಗಬೇಕು ಮತ್ತು ಉದ್ಯೋಗಿಗಲಾಗಬೇಕೆಂಬ ಕನಸನ್ನು ನನಸಾಗಿಸಿದ ಸ್ಥಾಪಕರಿಗೆ ಕೃತಜ್ಞರಾಗಿರುವುದು ನಮ್ಮ ಕರ್ತವ್ಯ. ಜನರ ಸೇವೆಗಾಗಿ ಪರೋಪಕಾರಿಗಳಾಗಿ ಬದುಕಬೇಕು. ಅಲ್ಲದೇ ವಿದ್ಯಾಸಂಸ್ಥೆಗಳ ಪರಿಪೂರ್ಣ ಅಭಿವೃದ್ಧಿಗಾಗಿ ಕಾಯಕಲ್ಪವನ್ನು ತೊಡಬೇಕು ಮತ್ತು ಶ್ರಮಿಸಬೇಕು ಎಂದು ಕರೆ ನೀಡಿದರು.

ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಸದಾನಂದ ಛಾತ್ರ ಅವರು ವಿಶ್ವಸ್ಥರ ಪರ. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ನಾರಾಯಣ ತಂತ್ರಿ ಪ್ರಾಧ್ಯಪಕರ ಪರವಾಗಿ, ತೃತೀಯ ಬಿ.ಎ ವಿದ್ಯಾರ್ಥಿನಿ ಅಮೃತವಿದ್ಯಾರ್ಥಿಗಳ ಪರವಾಗಿಸಂಸ್ಥಾಪಕರ ಸಂಸ್ಮರಣೆಗೈದರು.

ಈ ಸಂದರ್ಭದಲ್ಲಿ ಪ್ರತಿಭಾವಂತ (ಶೆ90%)ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡಿ ಗೌರವಿಸಲಾಯಿತು. ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ನಡೆದ ಅಂತರ ಕಾಲೇಜು ಸಂಗೀತ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ. ಎ.ಎಸ್. ಭಂಡಾರ್ಕಾರ್ ಪರ‍್ಯಾಯ ಫಲಕವನ್ನು ಪಡೆದ ಆಳ್ವಾಸ್ ಕಾಲೇಜು ಮೂಡಬಿದ್ರೆ ಪಡೆಯಿತು.

ಈ ಸಂದರ್ಭದಲ್ಲಿ ಕಾಲೇಜಿನ ವಿಶ್ವಸ್ಥರಾದ ಶ್ರೀ ದೇವದಾಸ್ ಕಾಮತ್, ಕೆ.ಶಾಂತಾರಾಮ್ ಪ್ರಭು, ಶ್ರೀ ರಾಜೇಂದ್ರ ತೋಳಾರ್, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಪ್ರಜ್ಞೇಶ್ ಪ್ರಭು, ಶ್ರೀ ಪ್ರಕಾಶ್ ಸೋನ್ಸ್, ಉಪಸ್ಥಿತರಿದ್ದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಭಂಡಾರ್ಕಾರ‍್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡ ವಂದಿಸಿದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಅರುಣಾಚಲ ಮಯ್ಯ ಕಾರ‍್ಯಕ್ರಮ ನಿರ್ವಹಿಸಿದರು.

Exit mobile version