Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ: ಕರ್ನಾಟಕ ಪಬ್ಲಿಕ್ ಸ್ಕೂಲ್‌ ಹಳೆ ವಿದ್ಯಾರ್ಥಿ ಸಂಘದಿಂದ ಪ್ರತಿಭಾ ಪುರಸ್ಕಾರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ತಾವು ಕಲಿತ ಶಾಲೆಯಲ್ಲಿ ನಿಕಟವಾದ ಸಂಪರ್ಕವನ್ನು ಇಟ್ಟುಕೊಂಡು ಕಳೆದ ಬಹಳ ವರ್ಷಗಳಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೂ ಗುರುತಿಸಿ  ಪ್ರೋತ್ಸಾಹಿಸುತ್ತಿರುವುದು ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗುತ್ತದೆ. ಈ ಕಾರ್ಯದಿಂದಾಗಿ ಮತ್ತಷ್ಟು ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದೆ ಬರಲು ಉತ್ತೇಜಿಸುತ್ತಿರುವ ಇವರ ಕಾರ್ಯ ಮೆಚ್ಚುಗೆ ಪಡುವಂತದ್ದು ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇದರ ಪ್ರಾಂಶುಪಾಲರಾದ ಪ್ರಕಾಶ ಶೆಟ್ಟಿ ಹೇಳಿದರು.

ಅವರು ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗ ಚೇತನಾ ಸಭಾಭವನದಲ್ಲಿ ಶುಕ್ರವಾರ ಜರುಗಿದ 2002-03ನೇ ಸಾಲಿನ ಸ್ನೇಹ ಸಂಗಮ ಹಳೆ ವಿದ್ಯಾರ್ಥಿ ಸಂಘದ 14ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಪ ಪ್ರಾಂಶುಪಾಲರಾದ ಚಂದ್ರಶೇಖರ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಎಸ್‌ಡಿಎಮ್‌ಸಿ ಸದಸ್ಯ ಅಶೋಕ ಜಿ., ಸ್ನೇಹ ಸಂಗಮ ಹಳೇ ವಿದ್ಯಾರ್ಥಿ ಸಂಘದ ಅಧಕ್ಷ ಗೀರಿಶ್ ಪೂಜಾರಿ, ಸದಸ್ಯರಾದ ರವಿ ದೇವಾಡಿಗ, ಯೋಗೀಶ್ ದೇವಾಡಿಗ, ರಾಘವೇಂದ್ರ ಎಸ್ ಬೀಜಾಡಿ ಉಪಸ್ಥಿತರಿದ್ದರು.

ಕಲಿಕೆ, ಸಾಂಸ್ಕೃತಿಕ, ಕ್ರೀಡೆಯಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಓಟ್ಟು 31,840 ಮೊತ್ತದ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಇದೇ ಸಮಯ ಉತ್ತಮ ಕನ್ನಡ ಸಾಧಕ ಶಿಕ್ಷಕಿ ಪ್ರಶಸ್ತಿ ವಿಜೇತ ಶಿಕ್ಷಕಿ ಸುಧಾ ನಾಯಕ್ ಅವರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸುಧಾ ನಾಯಕ ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ಜಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯರಾದ ದಿವ್ಯ ಪ್ರಭಾ ಸ್ವಾಗತಿಸಿ, ರೇಷ್ಮಾ ವಂದಿಸಿದರು.

Exit mobile version