Site icon Kundapra.com ಕುಂದಾಪ್ರ ಡಾಟ್ ಕಾಂ

ನೇಪಾಳದಲ್ಲಿ ನಡೆಯುವ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿರುವ ಕೋಟ ದಿನೇಶ್ ಗಾಣಿಗ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ನೇಪಾಳ ರಂಗಶೀಲ ಸ್ಟೈಡಿಯಂನಲ್ಲಿ ಜು.26 – 27ರಂದು ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಪಟು ಕೋಟ ದಿನೇಶ ಗಾಣಿಗ ಅವರು ಪಾಲ್ಗೊಳ್ಳಲಿದ್ದು ವೇಗ ನಡಿಗೆ, ಗುಂಡೆಸೆತ, ಲಾಂಗ್ ಜಂಪ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ದಿನೇಶ್ ಅವರು ಈ ಹಿಂದೆ ಥೈಲ್ಯಾಂಡ್‌ನ ರಾಜಾಬಟಾ ಸ್ಟೇಡಿಯಂನಲ್ಲಿ ನಡೆದ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಒಂದು ಚಿನ್ನದ ಪದಕ, ಹರ್ಡಲ್ಸ್‌ನಲ್ಲಿ ದ್ವಿತೀಯ ಬೆಳ್ಳಿ ಪದಕ ಮತ್ತು ವೇಗ ನಡಿಗೆಯಲ್ಲಿ ತೃತೀಯ – ಕಂಚು ಪದಕ ಹಾಗೂ 2021 ಸಿಂಗಾಪುರ, 2022 ಮಲೇಷಿಯಾ ಹಾಗೂ 2023ರಲ್ಲಿ ಶ್ರೀಲಂಕಾದ ಅಂತಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚು ಪದಕ ವಿಜೇತರಾಗಿದ್ದಾರೆ.

Exit mobile version