Site icon Kundapra.com ಕುಂದಾಪ್ರ ಡಾಟ್ ಕಾಂ

ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಡಿಸಿ ಸ್ವರೂಪ ಟಿ.ಕೆ ಭೇಟಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ
: ಇಲ್ಲಿನ ಕೋಟತಟ್ಟು ಗ್ರಾಮ ಪಂಚಾಯತ್ ಕಾರಂತ ಥೀಮ್ ಪಾರ್ಕ್‌ಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಗುರುವಾರ ಭೇಟಿ ನೀಡಿದರು.

ಈ ಸಂಧರ್ಭದಲ್ಲಿ ಕಾರಂತ ಥೀಂ ಪಾಕ್೯ ಅಭಿವೃದ್ಧಿ ಕುರಿತಂತೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿ ಬಳಿ ಚರ್ಚಿಸಿದರಲ್ಲದೆ ಒಂದು ಗ್ರಾಮಪಂಚಾಯತ್ ಸಾಹಿತಿಯೊಬ್ಬರ ಹೆಸರಿನಲ್ಲಿ ಥೀಂ ಪಾರ್ಕ ರಚಿಸಿ ಅದನ್ನು ನಿರ್ವಹಿಸುವ ಕಾರ್ಯವೈಕರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಕಾರಂತ ಥೀಂ ಪಾಕ್೯ ವಿಕ್ಷೀಸಿ ಕಲ್ಮಾಡಿ ಅಂಗನವಾಡಿ ಮಕ್ಕಳೊಂದಿಗೆ ಕೆಲ ಹೊತು ಕಳೆದರು.

ಈ ವೇಳೆ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಸತೀಶ್ ಕುಂದರ್ ಬಾರಿಕೆರೆ, ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ  ವಾಸು ಪೂಜಾರಿ, ಸೀತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್, ಕಂದಾಯ ನಿರೀಕ್ಷಕರಾದ ಮಂಜುನಾಥ ಬಿಲ್ಲವ, ಗ್ರಾಮಾಡಳಿತಧಿಕಾರಿ ಚೆಲುವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಪೂರ್ಣಿಮಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version