Site icon Kundapra.com ಕುಂದಾಪ್ರ ಡಾಟ್ ಕಾಂ

ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ಬೆಸ್ಟ್ ಸೋಷಿಯಲ್ ವರ್ಕಿಂಗ್ ಆವಾರ್ಡ್‌

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಸಾಲಿಗ್ರಾಮದ ತೊಡ್ಕಟ್ಟಿನಲ್ಲಿರುವ ಹೊಸಬದುಕು ಆಶ್ರಮದ ಸಾಮಾಜಿಕ ಕಳಕಳಿಗೆ ಬೆಂಗಳೂರಿನ ಚಿತ್ರಸಂತೆ ಎನ್ನುವ ಸಂಸ್ಥೆ  ಎಕ್ಸ್ಲೆನ್ಸ್ ಸೋಶಿಯಲ್ ಸರ್ವಿಸ್ ಎನ್ನುವ ಅವಾರ್ಡ್ ಅನ್ನು ನೀಡಿ ಗೌರವಿಸಿದೆ.

ಕಳೆದ ಸಾಕಷ್ಟು ವರ್ಷಗಳಿಂದ ಅನಾಥರ ಬಾಳಿನ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿದೆ.

ಚಲನಚಿತ್ರ ನಿರ್ದೇಶಕರಾದ  ಸಾಯಿ  ಪ್ರಕಾಶ್ ಈ ಅವಾರ್ಡ್‌ನ್ನು ಹೊಸ ಬದುಕು ಆಶ್ರಮದ ಮುಖ್ಯಸ್ಥ ಹ.ರಾ ವಿನಯಚಂದ್ರ ಸಾಸ್ತಾನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಚಲನಚಿತ್ರ ನಟರು, ನಟಿಯರು ನಿರ್ದೇಶಕರು, ನಿರ್ಮಾಪಕರುಗಳು ಈ ಕಾರ್ಯಕ್ರಮ ಉಪಸ್ಥಿತರಿದ್ದರು.

Exit mobile version