ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ರಚಿಸಿದ ಶ್ರೀ ಅಮೃತೇಶ್ವರಿ ತಾಯಿಯ ರಂಗೋಲಿ ಭಕ್ತರ ಗಮನ ಸೆಳೆಯಿತು. ಹಂದಟ್ಟು ನಿವಾಸಿ ಪ್ರಜ್ಞಾ ಜಿ. ಹಂದಟ್ಟು ಈ ಸುಂದರ ರಂಗೊಳಿಯಲ್ಲಿ ರಚಿಸಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಮೆಚ್ಚುಗೆಗೆ ಪಾತ್ರವಾಗಿದೆ.

ಉಡುಪಿಯ ಪಿಪಿಸಿ ಕಾಲೇಜಿನ ಎಂ.ಎಸ್ಸಿ ಪದವೀಧರೆಯಾಗಿರುವ ಪ್ರಜ್ಞಾ ಹಂದಟ್ಟು ಅವರು ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಗುರುವಿಲ್ಲದೆ ತನ್ನ ಸ್ವಂತ ಪರಿಶ್ರಮ ಹಾಗೂ ಆಸಕ್ತಿಯಿಂದ ರಂಗೊಲಿ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಈ ಹಿಂದೆ ಕಟೀಲು ದುರ್ಗಾಪರಮೇಶ್ವರಿ ದೇವಿಯ ಚಿತ್ರ ಸೇರಿದಂತೆ ಚಲನಚಿತ್ರ ನಟ ದೊಡ್ಡಣ್ಣ, ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಅವರ ಚಿತ್ರ ಬಿಡಿಸಿ ಅವರಿಂದ ಶಹಬ್ಬಾಸ್ ಅನಿಸಿಕೊಂಡವರು. ಈಕೆಯ ಈ ಎಲ್ಲಾ ಸಾಧನೆಗೆ ಹಿಂದೆ ಇವರ ತಾಯಿ ಪೂರ್ಣಪ್ರಜ್ಞಾ ಕಾಲೇಜಿನ ಗ್ರಂಥಪಾಲಕಿ ಗೀತಾ ಪೂಜಾರಿ ಸಾಥ್ ನೀಡುತ್ತಿದ್ದಾರೆ. ಅಮೃತೇಶ್ವರಿ ದೇವಿ ರಂಗೊಲಿಯ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಕುಂದರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
* ಈ ಹಿಂದೆ ಅನೇಕ ಮಹಾನ್ ಸಾಧಕರ ಚಿತ್ರ ಬಿಡಿಸಿದ್ದೆ ಅಲ್ಲದೆ ಇತ್ತೀಚಿಗೆ ಸ್ವಾಮೀ ಕೊರಗಜ್ಜ, ಮಂಗಳೂರಿನ ಕಟೀಲೇಶ್ವರಿ ದೇವಿಯ ಚಿತ್ರ ಬಿಡಿಸಿದ್ದು ಇಂದು ವರಮಹಾಲಕ್ಷೀ ಅಂಗವಾಗಿ ತಾಯಿ ಅಮೃತೇಶ್ವರಿಯನ್ನು ರಂಗೋಲಿಯ ಮೂಲಕ ಬಿಡಿಸಿದ್ದೇನೆ. ದೇಗುಲದ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಿದ್ದು ತನ್ನ ತಾಯಿ ಗೀತಾ ಪೂಜಾರಿ ಬೆನ್ನೆಲುಬಾಗಿ ನಿಂತಿದ್ದಾರೆ. – ಪ್ರಜ್ಞಾ ಜಿ. ಹಂದಟ್ಟು, ಚಿತ್ರ ಕಲಾವಿದೆ